ಹೊಸದಿಗಂತ ಬೆಳಗಾವಿ:
ಕಿಡಿಗೇಡಿಗಳ ಕುಕೃತ್ಯದಿಂದ ಕುಂದಾನಗರಿ ಬೆಳಗಾವಿಯಲ್ಲಿ ಆಗಾಗ ಕೋಮು ಸಾಮರಸ್ಯಕ್ಕೆ ಭಂಗವುಂಟಾದ ಕಹಿ ಘಟನೆಗಳು ನಡೆದಿವೆ ಮತ್ತು ಪ್ರಕ್ಷುಬ್ಧ ಸ್ಥಿತಿಗೆ ಬೆಳಗಾವಿ ಸಾಕ್ಷಿಯಾಗಿದೆ.
ಆದರೆ, ಇತ್ತೀಚೆಗಷ್ಟೇ ಬೆಳಗಾವಿ ಜಿಲ್ಲಾಧಿಕಾರಿಋಳಾಗಿ ಅಧಿಕಾರ ವಹಿಸಿಕೊಂಡಿರುವ ಹಾಗೂ ಜಿಲ್ಲಾಡಳಿತಕ್ಕೆ ಕಳೆ ಬರುವಂತೆ ಕಾರ್ಯನಿರ್ವಹಿಸಸುತ್ತಿರುವ ಮೊಹಮ್ಮದ್ ರೋಷನ್ ಅವರು, ಈ ಬಾರಿಯ ಗಣೇಶೋತ್ಸವಕ್ಕೆ ಹೊಸದೊಂದು ಭಾಷ್ಯ ಬರೆದು ಸಾಮರಸ್ಯದ ಸಂದೇಶವನ್ನು ರವಾನಿಸಿದ್ದಾರೆ.
ಹೌದು, ಭಗವಾ ಬಣ್ಣದ ಕುರ್ತಾ, ಹಣೆ ಮೇಲೆ ಕುಂಕುಮ ತಿಲಕ ಅಪ್ಪಟ ಹಿಂದೂ ಸಂಸ್ಕಾರಿಗಳಂತೆ ಆರತಿ ಬೆಳಗಿ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿದ್ದು ಬೆಳಗಾವಿಗರ ಪಾಲಿಗೆ ಸಂತಸದ ಕ್ಷಣವೇ ಸರಿ.
ಇಲ್ಲಿನ ಚೆನ್ನಮ್ಮ ಸರ್ಕಲ್ ದಲ್ಲಿರುವ ಗಣೇಶನ ದೇವಸ್ಥಾನದಲ್ಲಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಭಕ್ತಿಪೂರ್ವಕವಾಗಿ ವಿಶ್ವೇಶ್ವರ ನಗರದ ತಮ್ಮ ಸರ್ಕಾರಿ ಬಂಗಲೆಗೆ ತೆಗೆದುಕೊಂಡು ಹೋಗಿ ಗಣಪನನ್ನು ಪ್ರತಿಷ್ಠಾಪಿಸುವ ಮೂಲಕ ಸಾಮರಸ್ಯದ ಬದುಕಿಗೆ ನಾಂದಿ ಹಾಡಿದ್ದಾರೆ.
ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ ಅವರಿಗೆ ಅವರ ಪತ್ನಿ ಶ್ರೀಮತಿ ಅಂಕಿತಾ, ಪುತ್ರ ಅಯಾನ್ ಸೇರಿದಂತೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಹಾಗೂ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.