ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣಪತಿ ಪ್ರಸಾದ ಪರೀಕ್ಷೆ ಮಾಡಿ ವಿತರಣೆ ವಿಚಾರಕ್ಕೆ, ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ. ಸಿಎಂಗೆ ಯಾಕೆ ಹಿಂದೂಗಳ ಬಗ್ಗೆ ಈ ಭಾವನೆ. ಕಾನೂನಿಗೆ ಅಪಮಾನ ಮಾಡಬೇಡಿ ಎಂದು ಕೆಎಸ್ ಈಶ್ವರಪ್ಪ, ಸಿಎಂ ವಿರುದ್ಧ ಗರಂ ಆಗಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಾತ್ರವಲ್ಲ ಇಡೀ ದೇಶವೇ ಗಣಪತಿಯನ್ನು ಪೂಜಿಸುತ್ತದೆ. ಗಣಪತಿ ಪ್ರಸಾದ ನೀಡಬೇಕಾದರೆ ಆಹಾರ ನಿಯಂತ್ರಕರಿಂದ ಪರಿಶೀಲಿಸಬೇಕಂತೆ.
ಸಿದ್ದರಾಮಯ್ಯನವರು ಹುಟ್ಟುವ ಮೊದಲೇ ಈ ನಾಡಿನಲ್ಲಿ ಗಣಪತಿಯನ್ನು ಪೂಜಿಸುತ್ತಿದ್ದರು. ಕಾಂಗ್ರೆಸ್ ಪಕ್ಷ ಹುಟ್ಟುವ ಮುನ್ನವೇ ದೇಶದಲ್ಲಿ ಗಣಪತಿ ಇಡಲಾಗುತ್ತಿದೆ. ಈಗ ಸರ್ಕಾರ ಹೊಸ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನಾದರೂ ಹಿಂದುಗಳು ಎಚ್ಚೆತ್ತುಕೊಳ್ಳುವರೆ, ಕಾಂಗ್ರೆಸ್ ಹೆಜ್ಜೆ ಹೆಜ್ಜೆಗೆ ಹಿಂದೂ ವಿರೋಧಿ ನೀತಿಯನ್ನು ತೋರಿಸುತ್ತಾ ಇದೆ, ಆದರ ಬಾಲ ಹಿಡಿದು ಹೋಗುವ ಗುಲಾಮರಿಗೆ ಇನ್ನೂ ಕಾಣಿಸುತ್ತಿಲ್ಲ, ವಿದೇಶಿ ನೆಲದಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಅವರ ನಾಯಕ