ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಇಂದು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದು, ಖಡಕ್ ಎಚ್ಚರಿಕೆ ನಿಡಿದ್ದಾರೆ. 7 ದಿನಗಳಲ್ಲಿ ವರದಿ ನೀಡಲು ಸೂಚಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದಿದ್ದಾರೆ. ಇನ್ನು ಮೃತರ ಕುಟುಂಬಗಳಿಗೆ ಸರ್ಕಾರದಿಂದ ಎರಡು ಲಕ್ಷ ರೂ. ಪರಿಹಾರ ನೀಡಲಾಗುತ್ತಿದ್ದು, ಕಂಪನಿಯಿಂದಲೂ ಪರಿಹಾರ ಮತ್ತು ಆಸ್ಪತ್ರೆ ಎಂಡಿಗೆ ನೋಟಿಸ್ ಕೊಡಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ಸಿಸೇರಿಯನ್ ವೇಳೆ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಬಳ್ಳಾರಿಯಲ್ಲಿ ಸಿಸೇರಿಯನ್ ವೇಳೆ ಮೃತಪಟ್ಟ ಉದಾಹರಣೆ ಇಲ್ಲ. ಲಿಂಗರ್ ಲ್ಯಾಕ್ಟೇಟ್ ಪೂರೈಸಿದ್ದು ಬಂಗಾಳದ ಔಷಧ ಕಂಪನಿ. ಪಶ್ಚಿಮ ಬಂಗಾಳದ ಕಂಪನಿಯನ್ನ ಬ್ಲಾಕ್‌ಲಿಸ್ಟ್‌ಗೆ ಹಾಕಿದ್ದೇವೆ. ಬಳ್ಳಾರಿ ಜಿಲ್ಲಾ ಔಷಧ ನಿಯಂತ್ರಕನನ್ನ ಸಸ್ಪೆಂಡ್ ಮಾಡಿದ್ದೇವೆ ಎಂದಿದ್ದಾರೆ.
ಈಗ ಪೂರೈಕೆಯಾಗಿರುವ ಔಷಧಗಳನ್ನ ಹಿಂಪಡೆಯಲಾಗುತ್ತೆ. ಚೆನ್ನೈ ಮಾದರಿಯಲ್ಲಿ ಮೆಡಿಕಲ್ ಸ್ಟ್ರಕ್ಚರ್ ಜಾರಿಗೆ ಬಳ್ಳಾರಿಯ ಸರ್ಜನ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಆಪರೇಷನ್ ಮಾಡಿದ ವೈದ್ಯರ ತಪ್ಪಿಲ್ಲ ಎಂದು ಪ್ರಾಥಮಿಕ ವರದಿ ಇದೆ. ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಪ್ರತಿಕ್ರಿಯಿಸಿದ್ದು, ಡಿಸೆಂಬರ್ 9ರಂದು ವರದಿ ನೀಡುವುದಾಗಿ ಹೇಳಿದ್ದಾರೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಸಿಎಂ ಜೊತೆ ನಾವು ಚರ್ಚೆ ಮಾಡಿದ್ದೇವೆ. ನಮಗೆ ಅನುಮಾನ ಇರೋದು ದ್ರಾವಣದ ಮೇಲೆ. ಅದರ ಲ್ಯಾಬ್ ವರದಿ ಬರಬೇಕಿದೆ. ಮೃತ ಬಾಣಂತಿಯರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದೇವೆ. ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ ಅನ್ನೋದು ಇನ್ನೂ ಗೊತ್ತಿಲ್ಲ. ನಮಗೆ ಐವಿ ದ್ರಾವಣದ ಮೇಲೆ ಸಂಶಯವಿದೆ. ಒಟ್ಟು ನಾಲ್ವರು ಬಾಣಂತಿಯರಲ್ಲಿ ಇಬ್ಬರಿಗೆ ಮೊದಲ ಹೆರಿಗೆ ಆಗಿತ್ತು. ಆರೋಗ್ಯವೂ ಉತ್ತಮವಿತ್ತು, ಮೃತಪಟ್ಟಿರೋದು ನೋವಿನ ಸಂಗತಿ ಎಂದು ಹೇಳಿದ್ದಾರೆ.
ನಾವು ಮೊದಲು ಅವರನ್ನ ಬ್ಲಾಕ್ಗೆ ಹಾಕಿದ್ದೆವು. ಅವರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಸೆಂಟ್ರಲ್ ಲ್ಯಾಬ್ನಲ್ಲಿ ಅದು ಕರೆಕ್ಟ್ ಇದೆ ಅಂತ ಬರುತ್ತೆ. ಎನ್ಇಎ ಲ್ಯಾಬ್ನಲ್ಲಿ ಉಪಯೋಗ ಮಾಡಬಹುದು ಅಂತಿದೆ. ಡ್ರಗ್ ಕಂಟ್ರೋಲ್ 92 ಬ್ಯಾಚ್ ಪರೀಕ್ಷೆ ಮಾಡಿತ್ತು. ಆದರೆ 22 ಬ್ಯಾಚ್ಗಳ ಬಗ್ಗೆ ವರದಿ ಸರಿಯಾಗಿ ಬರಲಿಲ್ಲ. ಬಳ್ಳಾರಿ ಬ್ಯಾಚ್ ವರದಿ ಪರೀಕ್ಷೆಗೆ ಹೋಗಿದೆ. ಈ ಹಿಂದೆ ಸಂಶಯ ಬಂದಾಗ ನಾವು ಪರೀಕ್ಷೆಗೆ ಕಳಿಸಿದ್ದೆವು. ವೈದ್ಯರು ಕೆಲಸ ಮಾಡಿದ್ದಾರೆ, ಐವಿ ದ್ರಾವಣ ಮೇಲೆ ಸಂಶಯ ಬಂದಿದೆ. ಈಗ ಎಕ್ಸ್ಪರ್ಟ್ ಕಮಿಟಿ ಮಾಡಿದ್ದೇವೆ, ಅವರೂ ಪರಿಶೀಲಿಸುತ್ತಾರೆ ಎಂದು ಹೇಳಿದ್ದಾರೆ.