ಐಟಿ ನವೋದ್ಯಮಿಗಳೊಂದಿಗೆ ಸಚಿವ ಖರ್ಗೆ ಸಭೆ: ತಿಂಗಳೊಳಗೆ ಕಲಬುರಗಿಯಲ್ಲಿ ಇನ್ಕ್ಯೂಬೇಶನ್ ಸೆಂಟರ್

ಹೊಸದಿಗಂತ ವರದಿ, ಕಲಬುರಗಿ:

ಐ.ಟಿ. ನವೋದ್ಯಮಗಳಿಗೆ ಪ್ರೋತ್ಸಾಹಿಸುವ ದೃಷ್ಠಿಯಿಂದ ಹೆಚ್ಚಿನ ಮೂಲಸೌಕರ್ಯ ಮತ್ತು ತಾಂತ್ರಿಕ ಸಹಾಯ ಒದಗಿಸುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಇನ್ಕ್ಯುಬೇಶನ್ ಸೆಂಟರ್ ಸ್ಥಾಪಿಸಲು ನಿರ್ಧರಿಸಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಇಂಜಿನೀಯರಿಂಗ್ ಕಾಲೇಜು, ವಿಜ್ಞಾನ ಪದವಿ ಕಾಲೇಜು ಹಾಗೂ ನವೋದ್ಯಮಿಗಳೊಂದಿಗೆ ಸಭೆ ನಡೆಸಿದ ಅವರು, ಇಂಜಿನೀಯರ್ ಕಾಲೇಜಿನವರು ನಗರದಲ್ಲಿ ಸುಮಾರು 5,000 ಚದುರ ಅಡಿ ಅಳತೆಯ ಸುಸಜ್ಜಿತ ಕಟ್ಟಡ ನೀಡಿದಲ್ಲಿ ಕೂಡಲೆ ಸೆಂಟರ್ ಆರಂಭಿಸಲಾಗುವುದು. ಇದಕ್ಕಾಗಿ ಎಲ್ಲಾ ನವೋದ್ಯಮಿಗಳು ಸಭೆ ಸೇರಿ ತಮಗೆ ಬೇಕಾದ ಮೂಲಸೌಕರ್ಯ ಮತ್ತು ತಾಂತ್ರಿಕ ಸಹಾಯದ ಬೇಡಿಕೆಯನ್ನು ನೀಲಿನಕ್ಷೆ ರೂಪದಲ್ಲಿ ಸಿದ್ದಪಡಿಸಿ ನೀಡಿದಲ್ಲಿ ಅದನ್ನು ಪೂರೈಸಲಾಗುವುದು ಎಂದರು.

ನವೋದ್ಯಮಗಳನ್ನು ಪೋಷಿಸಲು ಮತ್ತು ಕೈಗಾರಿಕೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನುರಿತ ಉದ್ಯೋಗಿಗಳನ್ನು ಸೃಷ್ಟಿಸುವ ಗುರಿಯನ್ನು ಈ ಕೇಂದ್ರ ಹೊಂದಿರಲಿದೆ. ಅತ್ಯಾಧುನಿಕ ಮೂಲಸೌಕರ್ಯ, ತಜ್ಞರ ಮಾರ್ಗದರ್ಶನ ಮತ್ತು ಉದ್ಯಮದ ಸಹಭಾಗಿತ್ವದೊಂದಿಗೆ, ಉದ್ದೇಶಿತ ಕೇಂದ್ರವು ಉದ್ಯಮಿಗಳನ್ನು ಸಶಕ್ತಗೊಳಿಸುತ್ತದೆ ಮತ್ತು ನುರಿತ ಪ್ರತಿಭಾವಂತ ಉದ್ಯೋಗಿಗಳ ಗುಂಪನ್ನು ರೂಪಿಸಲಿದ್ದು, ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲಿದೆ ಎಂದರು.

ಐ.ಟಿ.-ಬಿ.ಟಿ ಬೆಳವಣಿಗೆ ಕುರಿತು ಹೆಸರಾಂ, ಕಾರ್ಪೋರೇಟ್ ಜಗತ್ತಿನ ತಜ್ಞರನ್ನು ಕರೆಸಿ ಕಾನ್ಕ್ಲೇವ್, ತರಬೇತಿ, ಕಾರ್ಯಾಗಾರ ಹೀಗೆ ನಾನಾ ರೀತಿಯ ಚಟುವಟಿಕೆಗಳು ಕೇಂದ್ರದ ಮೂಲಕ ಹಾಕಿಕೊಳ್ಳಬಹುದಾಗಿದೆ. ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದ ಸಚಿವರು, ಜಿಲ್ಲೆಯಲ್ಲಿ ಅಂದಾಜು 90 ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ 300 ಸ್ಟಾರ್ಟ್ ಅಪ್ ಕಂಪನಿಗಳು ನೊಂದಾಯಿಸಿಕೊಂಡಿವೆ ಎಂದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!