Sunday, December 3, 2023

Latest Posts

ಬಳ್ಳಾರಿ ಮತ್ತೆ ‘ಒಂದಾ’ಗಬೇಕು, ಜನರು ಒಪ್ಪಿದರೆ ಸಿಎಂ ಜೊತೆ ಚರ್ಚೆ: ಸಚಿವ ಬಿ. ನಾಗೇಂದ್ರ

ಹೊಸದಿಗಂತ ವರದಿ ಬಳ್ಳಾರಿ:

ಅಖಂಡ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿರುವುದು ಅತ್ಯಂತ ನೋವು ತಂದಿದೆ, ವಿಜಯನಗರ ಜಿಲ್ಲೆಯ ಜನಪ್ರತಿನಿಧಿಗಳು ಮತ್ತೆ ಒಂದು ಮಾಡೋಕೆ ಒಪ್ಪಿದರೇ ಮುಖ್ಯಮಂತ್ರಿಗಳೊಂದಿಗೆ ಚೆರ್ಚಿಸಲಾಗುವುದು
ಎಂದು ಯುವಜನ ಸೇವಾ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.

ವಿಶ್ವ ಪ್ರಸಿದ್ಧ ಹಂಪಿ, ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಸೇರಿದಂತೆ ಇತರೇ ಪ್ರೇಕ್ಷಣೀಯ ಸ್ಥಳಗಳು ನಮ್ಮ ಜಿಲ್ಲೆಯಿಂದ ದೂರವಾಗಿವೆ, ಇದು ನಮಗೆ ಅತ್ಯಂತ ನೋವು ತಂದಿದೆ.

ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ನಾವೆಲ್ಲರೂ ಅಣ್ಣತಮ್ಮಂದಿರಂತೆ ಇದ್ದೇವೆ, ಮತ್ತೆ ಅಖಂಡ ಬಳ್ಳಾರಿ ಮಾಡಬೇಕೆನ್ನುವ ಆಸೆಯಲ್ಲಿ ತಪ್ಪಿಲ್ಲ, ಈ ಹಿಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮತ್ತೆ ಅಖಂಡ ಜಿಲ್ಲೆಯನ್ನು ಒಂದು ಮಾಡ್ತೇವೆ ಅಂದಿದ್ವಿ, ಸ್ಥಳೀಯರ ಗಮನಕ್ಕೆ ತಂದು, ಅವರೆಲ್ಲರೂ ಒಪ್ಪುವದಾದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚೆರ್ಚಿಸುವೆ ಎಂದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪ‌ಮೇರ್ ಬಿ.ಜಾನಕಿ, ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ಉಮಾದೇವಿ ಶಿವರಾಜ್, ರಾಮಾಂಜಿನೇಯ, ಮುಖಂಡರಾದ ಮುಂಡರಗಿ ನಾಗರಾಜ್, ವೆಂಕಟೇಶ ಹೆಗಡೆ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!