ಕೋಲಾರದ ಬೆಮೆಲ್ ಕಾರ್ಖಾನೆ ಖಾಸಗಿಯವರಿಗೆ ಹಸ್ತಾಂತರ ಇಲ್ಲ: ಸಚಿವ ಮುರುಗೇಶ್ ನಿರಾಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೋಲಾರದಲ್ಲಿರುವ ಬಿಇಎಂಎಲ್ (ಬೆಮೆಲ್) ಕಾರ್ಖಾನೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವುದಿಲ್ಲ. ಇದು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಈ ಬಗ್ಗೆ ವದಂತಿಗಳಿಗೆ ಕಿವಿಗೊಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಮನವಿ ಮಾಡಿದರು.

ಜೆಡಿಎಸ್‍ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ವಿಧಾನಪರಿಷತ್‍ನಲ್ಲಿ ಮಂಗಳವಾರ ಉತ್ತರಿಸಿದ ಸಚಿವ ನಿರಾಣಿಯವರು, “ಬೆಮೆಲ್ ಕಾರ್ಖಾನೆ 16 ಸಾವಿರ ಎಕರೆ ಜಾಗದಲ್ಲಿ 12,500 ಎಕರೆ ಖಾತೆ ಆಗಿದೆ. 3500 ಎಕರೆಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ರಾಜ್ಯ ಸರ್ಕಾರಕ್ಕೆ ಬಿಟ್ಟು ಕೊಡಲು ನಿರ್ಧರಿಸಿದೆ. ಮತ್ತೊಮ್ಮೆ ಆ ಭಾಗದಲ್ಲಿ ಡ್ರೋನ್ ಸರ್ವೆ ನಡೆಸಲಾಗಿದ್ದು, ಎರಡು ದಿನಗಳಲ್ಲಿ ಕೇಂದ್ರ ಸಚಿವರಿಗೆ ವರದಿಯನ್ನು ಸಲ್ಲಿಸಲಾಗುತ್ತದೆ. ಇದೇ ಮಾರ್ಚ್‌ 10 ರಂದು ದೆಹಲಿಗೆ ತೆರಳಿ ಗಣಿ ಸಚಿವರ ಜತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ಹೇಳಿದರು.

  • ಬಿಇಎಂಎಲ್‌ ನಲ್ಲಿ 1149 ಎಕರೆ ಭೂಮಿ- ಬೆಮೆಲ್‌ ಗೆ ನೀಡಿದ್ದ 979 ಎಕರೆ ಭೂಮಿ ತಟಸ್ಥವಾಗಿರುವ ಹಿನ್ನೆಲೆ ಅಲ್ಲಿ ಖಾಸಗಿ ಕೈಗಾರಿಕೆಗಳ ಸ್ಥಾಪೆನೆಗೆ ಅವಕಾಶ.
  • ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ಎಸ್ಸಿ-ಎಸ್ಟಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಆದ್ಯತೆ.
  • ಕೇಂದ್ರದ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಖಾನೆ ಕಾರ್ಯ ಮುಂದುವರಿಕೆ.  ಕಾರ್ಖಾನೆಯಲ್ಲಿರುವ ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲಾಗುತ್ತದೆ. ಬೆಮೆಲ್‍ನಲ್ಲಿ ಪ್ರಸ್ತುತ ಶೇ.47ರಷ್ಟು ಬಂಡವಾಳ ಇದೆ. ಅದನ್ನು ಸದ್ಯಕ್ಕೆ ಮುಂದುವರಿಸಲಾಗುತ್ತದೆ.
  • ಕಾರ್ಖಾನೆಗಳ ಬಳಿಯೇ ಜನವಸತಿ ಪ್ರದೇಶಗಳಿಗೆ ಉಪನಗರಗಳನ್ನು ನಿರ್ಮಿಸಲು ಯೋಜನೆ.
  • ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ.85ರಷ್ಟನ್ನು ಕೈಗಾರಿಕೆಗಳಿಗೆ, ಉಳಿದ ಪ್ರದೇಶದಲ್ಲಿ ಜನ ವಸತಿ ನಿರ್ಮಿಸಿ ವಾಕ್ ಟು ವರ್ಕ್ ಕಲ್ಪನೆ ಜಾರಿಗೆ ಬರಲಿದೆ.
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!