ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮ್ಮ ವಯಸ್ಸು ಆರಾಗಿರಲಿ, ಅರವತ್ತಾಗಿರಲಿ.. ಕುಟುಂಬದ ಜವಾಬ್ದಾರಿ ಹೆಚ್ಚಾಗಿರಲಿ ಅಥವಾ ಕಡಿಮೆ ಇರಲಿ.. ಡ್ಯಾನ್ಸ್ ಮಾಡೋದನ್ನ ಮಾತ್ರ ಬಿಡಬೇಡಿ. ನೃತ್ಯ ಅನ್ನೋದು ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ. ಇದು ದೇಹದ ಆರೋಗ್ಯ ಹಾಗೂ ಮನಸ್ಸಿನ ನೆಮ್ಮದಿ ಕಾಪಾಡುತ್ತೆ.. ನೀವೇನಾದರೂ ಡ್ಯಾನ್ಸ್ ಮಾಡೋದನ್ನ ಬಿಟ್ಟಿದ್ದರೆ ಮತ್ತೆ ರೂಢಿಸಿಕೊಳ್ಳಿ…
- ನಿಮ್ಮ ಹೃದಯ ಆರೋಗ್ಯವಾಗಿರುತ್ತೆ.
- ನಿಮ್ಮ ದೇಹ ಹೆಚ್ಚು ಫ್ಲೆಕ್ಸಿಬಲ್ ಆಗುತ್ತೆ.
- ಮೆದುಳಿಗೆ ಹೆಚ್ಚು ಕೆಲಸ ಸಿಗುತ್ತೆ, ನೆನಪಿನ ಶಕ್ತಿಯೂ ವೃದ್ಧಿಯಾಗುತ್ತೆ.
- ಡ್ಯಾನ್ಸ್ ನಿಮ್ಮ ಸ್ಟ್ರೆಸ್ ಕಡಿಮೆ ಮಾಡುತ್ತೆ.
- ಒಂದು ಗಂಟೆಗಳ ಕಾಲ ಡ್ಯಾನ್ಸ್ ಮಾಡಿದ್ರೆ 300-800 ಕ್ಯಾಲೊರಿ ಕರಗುತ್ತೆ.
- ನಿಮ್ಮನ್ನು ಫ್ರೆಶ್ ಹಾಗೂ ಖುಷಿಯಾಗಿರಿಸುತ್ತೆ.
- ಡಿಪ್ರೆಷನ್ ನಲ್ಲಿರುವವರಿಗೆ ಔಷಧವಾಗಲಿದೆ.
- ಡ್ಯಾನ್ಸ್ ಮಾಡುವುದರಿಂದ ನಿಮ್ಮ ಕಲೆಗೆ ಮನಸೋತು ಫ್ರೆಂಡ್ಸ್ ಹೆಚ್ಚಾಗುತ್ತಾರೆ.
- ನಿಮ್ಮಲ್ಲಿನ ಸ್ಟೇಜ್ ಫಿಯರ್ ದೂರವಾಗಿ, ಕಾನ್ಫಿಡೆನ್ಸ್ ಹೆಚ್ಚಾಗುತ್ತೆ.
- ನಿಮ್ಮ ಮಾಂಸಕಂಡಗಳು ಬಲಗೊಳ್ಳುತ್ತದೆ.
- ಇಡೀ ಕುಟುಂಬವನ್ನು ಆಕ್ಟೀವ್ ಆಗಿರಿಸಬಹುದು.
- ಪೀರಿಯಡ್ಸ್ ಸಮಯದಲ್ಲಿ ಡ್ಯಾನ್ಸ್ ಮಾಡಿದರೆ ದೇಹದಲ್ಲಿ ರಕ್ತ ಸಂಚಾರ ವೃದ್ದಿಯಾಗುತ್ತೆ.