Saturday, September 23, 2023

Latest Posts

ಹೊಸ ವರ್ಷಕ್ಕೆ ಕಾಶಿ ವಿಶ್ವನಾಥನ ದರ್ಶನ ಮಾಡಿದವರು 5 ಲಕ್ಷ ಜನ, ಇದು ಮಹಾಶಿವರಾತ್ರಿಗಿಂತ ಹೆಚ್ಚು

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಮಂದಿರದ ಕಾಯಕಲ್ಪ ಮಾಡಿರುವ ವಿದ್ಯಮಾನವು ದೇಶದ ಶ್ರದ್ಧಾಳುಗಳನ್ನೆಲ್ಲ ಹಿತವಾಗಿ ತಟ್ಟಿರುವುದು, ಉತ್ತೇಜಿಸಿರುವುದು ಸ್ಪಷ್ಟವಾಗಿದೆ. ಏಕೆಂದರೆ, ಕ್ಯಾಲೆಂಡರ್ ವರ್ಷದ ಬದಲಾವಣೆಯನ್ನು ಕಾಶಿ ವಿಶ್ವನಾಥನ ದರ್ಶನದ ಮೂಲಕವೇ ಆರಂಭಿಸಿದ್ದಾರೆ ದೊಡ್ಡ ಸಂಖ್ಯೆಯ ಜನ.
ಹಿಂದು ಕ್ಯಾಲೆಂಡರಿನ ಪ್ರಕಾರ ಜನವರಿಯ ಹೊಸವರ್ಷಕ್ಕೆ ವಿಶೇಷ ಮಹತ್ವವೇನೂ ಇಲ್ಲ. ಹಾಗೆಂದೇ ದೇವಾಲಯದ ಆಡಳಿತ ಜನವರಿ ಒಂದರ ದಿನ ಒಂದು-ಒಂದೂವರೆ ಲಕ್ಷ ಮಂದಿ ಭೇಟಿ ನೀಡಬಹುದೆಂದು ಅಂದಾಜಿಸಿತ್ತು. ಏಕೆಂದರೆ ಬಹುತೇಕರಿಗೆ ಅಂದು ಕಚೇರಿ ಕೆಲಸಕ್ಕೆ ರಜೆ ಸಿಕ್ಕಿರುತ್ತದೆ ಎಂಬ ಕಾರಣಕ್ಕೆ. ಆದರೆ ಅವತ್ತು ಕಾಶಿ ವಿಶ್ವನಾಥ ಧಾಮಕ್ಕೆ ಭೇಟಿ ಕೊಟ್ಟವರು ಬರೋಬ್ಬರಿ ಐದು ಲಕ್ಷ ಮಂದಿ.
ಮಹಾಶಿವರಾತ್ರಿಯಲ್ಲೂ ಸೇರುತ್ತಿದ್ದದ್ದು ಸರಾಸರಿ ಎರಡೂವರೆ ಲಕ್ಷ ಮಂದಿ. ಹೀಗಾಗಿ ಇದೊಂದು ಹೊಸ ವಿದ್ಯಮಾನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಭವ್ಯವಾಗಿ ಮರು ನಿರ್ಮಾಣ ಮಾಡಿರುವ ಸಂಗತಿ ಜನರನ್ನು ಬಹಳ ಪ್ರೇರೇಪಿಸಿದೆ ಎಂಬುದನ್ನಿದು ಸಾರುತ್ತದೆ. ಇದೀಗ, ಮಹಾಶಿವರಾತ್ರಿ ಸೇರಿದಂತೆ ವಿಶೇಷ ಹಿಂದು ಹಬ್ಬಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾದೀತೆಂಬ ನಿರೀಕ್ಷೆ ಸಹಜವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!