October 5, 2026
Monday, October 5, 2026
spot_img

Rain Water Benefits: ಸುರಿಯುವ ಮಳೆಯಲ್ಲಿ ನೆನೆದರೆ ಮನಸ್ಸು ಮಾತ್ರವಲ್ಲ, ಆರೋಗ್ಯವೂ ಫಿಟ್!

ಮಳೆಗಾಲ ಆರಂಭವಾಗುತ್ತಿದ್ದಂತೆ ಎಲ್ಲರ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಆದರೆ, ಮಳೆ ನೀರಿನಲ್ಲಿ ನೆನೆಯುವುದು ಕೇವಲ ಮಜಾ ನೀಡುವುದಷ್ಟೇ ಅಲ್ಲ, ನಮ್ಮ ದೇಹ ಮತ್ತು ಮನಸ್ಸಿಗೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಎಂದು ನಿಮಗೆ ಗೊತ್ತೇ?

1. ಮಾನಸಿಕ ಒತ್ತಡ ನಿವಾರಣೆ

ಮಳೆ ಬೀಳುವಾಗ ಬರುವ ಮಣ್ಣಿನ ಸುವಾಸನೆ (Geosmin) ಮತ್ತು ಮಳೆಯ ಶಬ್ದವು ಮೆದುಳಿಗೆ ಹಿತವಾದ ಅನುಭವ ನೀಡುತ್ತದೆ. ಮಳೆಯಲ್ಲಿ ನೆನೆಯುವುದರಿಂದ ದೇಹದಲ್ಲಿ ‘ಎಂಡಾರ್ಫಿನ್’ ಎಂಬ ಹ್ಯಾಪಿ ಹಾರ್ಮೋನ್ ಬಿಡುಗಡೆಯಾಗಿ, ಕೇವಲ ಐದೇ ನಿಮಿಷಗಳಲ್ಲಿ ನಿಮ್ಮ ಮಾನಸಿಕ ಒತ್ತಡ, ಆತಂಕ ದೂರವಾಗುತ್ತದೆ.

2. ಚರ್ಮ ಮತ್ತು ಕೂದಲಿನ ಆರೋಗ್ಯ

ನೈಸರ್ಗಿಕ ಮಳೆ ನೀರು ಅತ್ಯಂತ ಮೃದುವಾಗಿರುತ್ತದೆ (Soft Water). ಇದರಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ. ಈ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ಮೇಲಿನ ಕೊಳಕು ನಿವಾರಣೆಯಾಗಿ, ತ್ವಚೆ ಕಾಂತಿಯುತವಾಗುತ್ತದೆ. ಹಾಗೆಯೇ, ತಲೆಯ ಹೊಟ್ಟು ಕಡಿಮೆಯಾಗಿ ಕೂದಲು ರೇಷ್ಮೆಯಂತಾಗುತ್ತದೆ.

3. ಹಾರ್ಮೋನ್‌ಗಳ ಸಮತೋಲನ

ಮಳೆ ನೀರಿನಲ್ಲಿ ನೆನೆಯುವುದರಿಂದ ದೇಹದ ಹಾರ್ಮೋನ್‌ಗಳ ಉತ್ಪತ್ತಿ ಸಮತೋಲನಕ್ಕೆ ಬರುತ್ತದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Must Read