ಹೊಸದಿಗಂತ ವರದಿ ಹುಬ್ಬಳ್ಳಿ:
ಜೈನ ನಿಗಮ ಮಂಡಳಿ ಸ್ಥಾಪನೆ ಹಾಗೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಡಿ. ೪ ರಂದು ಚಿಕ್ಕೋಡಿಯಿಂದ ಬೃಹತ್ ಪಾದಯಾತ್ರೆ ಆರಂಭಿಸಲಾಗುತ್ತಿದ್ದು, ಬೆಳಗಾವಿ ಸುವರ್ಣ ಸೌಧಕ್ಕೆ ಬಂದು ತಲುಪಿ ಬಳಿಕ ಸಲ್ಲೇಖನ ವೃತ (ದೇಹ ತ್ಯಾಗ) ಮಾಡಲಾಗುವುದು ಎಂದು ವರೂರಿನ ಗುಣಧರನಂದಿ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನ ನಿಗಮ ಮಂಡಳಿ ಸ್ಥಾಪನೆ, ಸಾಧು ಸಂತರ ಸುರಕ್ಷತೆ, ಬಡ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ, ಜೈನ ಸಾಧು- ಸಂತರ ರಾತ್ರಿ ವಾಸ್ತವ್ಯಕ್ಕಾಗಿ ವ್ಯವಸ್ಥೆ ಸೇರಿದಂತೆ ಐದು ಬೇಡಿಕೆ ಈಡೇರಿಸಬೇಕು ಎಂದು ಅನೇಕ ಬಾರಿ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ನಮ್ಮ ಬೇಡಿಕೆ ಈಡೇರುವ ವರೆಗೂ ಹೋರಾಟ ಕೈಬಿಡಲ್ಲ ಎಂದು ಎಚ್ಚರಿಕೆ ನೀಡಿದರು.
ಜೈನ ಸಮಾಜದಲ್ಲಿ ಎಲ್ಲರೂ ಶ್ರೀಮಂತರಿಲ್ಲ. ಶೇ. ೯೦ ರಷ್ಟು ಜನರು ಬಡವರ್ಗದವರು ಇದ್ದಾರೆ. ಅವರ ಅಭಿವೃದ್ಧಿಗಾಗಿ ಹಲವು ವರ್ಷದಿಂದ ಶ್ರಮಿಸಲಾಗುತ್ತಿದೆ. ಬಡವರ್ಗದ ಪರ ವಿರಬೇಕಾದ ಸರ್ಕಾರ ಸ್ಪಂದಿಸದಿರುವುದು ಬೇಸರದ ಸಂಗತಿ ಎಂದು ಕಿಡಿಕಾರಿದರು.
ಈ ಹಿಂದೆ ಹೋರಾಟ ಹಾಗೂ ಸಲ್ಲೇಖನ ವೃತ ಆರಂಭಿಸುವುದಾಗಿ ಹೇಳಿದಾಗ ಸಚಿವ ಸಂತೋಷ ಲಾಡ್, ಸಚಿವ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಕರೆ ಮಾಡಿ ಭರವಸೆ ನೀಡಿದ್ದಾರೆ. ಅದಾದ ಬಳಿಕ ಯಾವುದೇ ಮಾಹಿತಿ ದೊರೆಕಿಲ್ಲ. ಆದ್ದರಿಂದ ನ. ೧೯ ರಂದು ಬಾಗಲಕೋಟೆ ಜಿಲ್ಲೆಯ ತೆರಳದಾಳದಿಂದ ದೀಪ ಪ್ರಜ್ವನೆಯ ಮೂಲಕ ಪಾದಯಾತ್ರೆ ಆರಂಭವಾಗಲಿದೆ. ೧ ಲಕ್ಷ ಜನ ಸಮಾವೇಶಗೊಂಡು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಪತ್ರ ನೀಡುವ ಮೂಲಕ ನಿವೇದನಾ ಯಾತ್ರೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ವಜಾ ಮಾಡಬೇಕು. ಜೈನ ಸಮುದಾಯ ಸಾಧು ಸಂತರಿಗೆ ಸ್ಥಳೀಯ ಶಾಲೆಗಳಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲು ಮನವಿ ನೀಡಿದರೂ ಸ್ಪಂದಿಸುತ್ತಿಲ್ಲ. ಇಂತಹ ಸಚಿವರು ಇರುವುದೇಕೆ?. ಸಚಿವರ ಸ್ಥಾನದಲ್ಲಿ ಇರುವುದು ಬೇಸರದ ಸಂಗತಿ. ಅವರ ಬಗ್ಗೆ ಅಗೌರವ ವಿದೆ. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.



