November 13, 2026
Friday, November 13, 2026
spot_img

ಪ್ರಧಾನಿ ಮೋದಿ ಪ್ರಯಾಣಿಸುವ ನಮ್ಮ ಮೆಟ್ರೋ ಹತ್ತಲು ಇವರಿಗೆ ಮಾತ್ರ ಅವಕಾಶ! ಯಾರೆಲ್ಲಾ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನ ನಮ್ಮ ಮೆಟ್ರೋದ ಗುಲಾಬಿ ಮಾರ್ಗಕ್ಕೆ ಚಾಲನೆ ನೀಡಿದ್ದಾರೆ. ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಪಿಂಕ್‌ ಲೈನ್‌ಗೆ ಚಾಲನೆ ನೀಡಿದ್ದು, ತದನಂತರ ಮೆಟ್ರೋದಲ್ಲಿ ಸಂಚಾರ ಮಾಡಲಿದ್ದಾರೆ. ಪ್ರಧಾನಿ ಮೋದಿ ಇರುವ ಬೋಗಿಯಲ್ಲಿ ಬರೀ ನಾಲ್ಕು ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಹೌದು, ಪ್ರಧಾನಿ ಮೋದಿಯ ಜೊತೆ ರಾಜ್ಯಪಾಲರಾದ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಪ್ರಯಾಣ ಮಾಡಲಿದ್ದಾರೆ.

ಒಟ್ಟು 6 ಕೋಚ್‌ಗಳಿರುವ ಮೆಟ್ರೋದಲ್ಲಿ ಮೋದಿ ತಾವರೆಕೆರೆ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸಲಿದ್ದಾರೆ.ಮೊದಲ ಕೋಚ್‌ನಲ್ಲಿ ಬಿಎಂಆರ್‌ಸಿಎಲ್‌ ಎಮರ್ಜೆನ್ಸಿ ಸ್ಟಾಫ್‌, ಎರಡನೇ ಕೋಚ್‌ನಲ್ಲಿ ಪಿಎಂಒ ಆಫೀಸ್‌ನ ಅಧಿಕಾರಿಗಳು, ಮೂರನೇ ಕೋಚ್‌ನಲ್ಲಿ ಪ್ರಧಾನಿ ಮೋದಿ, ಸಿಎಂ ಡಿ.ಕೆ.ಶಿವಕುಮಾರ್‌, ರಾಜ್ಯಪಾಲರಾದ ಡಾ. ಸುಧಾ ಯಾದವ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಹಾಗೂ ಸಂಸದ ತೇಜಸ್ವಿ ಸೂರ್ಯ ಇರಲಿದ್ದಾರೆ. ಇನ್ನು ನಾಲ್ಕನೇ ಕೋಚ್‌ನಲ್ಲಿ ಸಚಿವರು ಹಾಗೂ ಸ್ಥಳೀಯ ಎಂಎಲ್‌ಎಗಳು ಇರಲಿದ್ದಾರೆ. ಐದನೇ ಕೋಚ್‌ನಲ್ಲಿ ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳು ಹಾಗೂ ಆರನೇ ಕೋಚ್‌ನಲ್ಲಿ ಬಿಎಂಆರ್ಸಿಎಲ್ ಸಿಬ್ಬಂದಿ ಇರಲಿದ್ದಾರೆ.

ಇದಾದ ನಂತರ ಪ್ರಧಾನಿ ಮೋದಿ ಹೆಲಿಕಾಪ್ಟರ್‌ನಲ್ಲಿ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಾವರೆಕಟ್ಟೆ ಬಳಿ ನಿರ್ಮಾಣವಾಗಿರುವ ವಿಶ್ವದ ಮೊದಲ ಟಿಲ್ಟೆಡ್‌ ತಾರಾಲಯವನ್ನು ಉದ್ಘಾಟನೆ ಮಾಡಲಿದ್ದಾರೆ.

Must Read