ಮುಸ್ಲಿಂ ಜಾತಿಗಳಿಗೆ ಮೀಸಲಾತಿ ನೀಡಲು ಬಂಗಾಳ ಸಿಎಂ ಬಯಸುತ್ತಾರೆ: ಅಮಿತ್ ಶಾ ಟೀಕಾಪ್ರಹಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

2010ರ ನಂತರ ರಾಜ್ಯದಲ್ಲಿ ನೀಡಲಾದ ಎಲ್ಲಾ ಒ.ಎಸ್.ಸಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವಾಗತಿಸಿದ್ದಾರೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಮತ ಬ್ಯಾಂಕ್ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ದೋಚಲು ಬಯಸುತ್ತಿದ್ದಾರೆ ಆ ಮೀಸಲಾತಿಯನ್ನು ಮುಸ್ಲಿಂ ಜಾತಿಗಳಿಗೆ ಕೊಡಲು ಬಯಸಿದ್ದಾರೆ ಎಂದು ಹೇಳಿದರು.

ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ ಅವರು “ಧರ್ಮ ಆಧಾರಿತ ಮೀಸಲಾತಿ” ಕುರಿತು ಕಾಂಗ್ರೆಸ್ ಅನ್ನು ಗುರಿಯಾಗಿಸಿದರು ಮತ್ತು ಬಿಜೆಪಿ ಇದನ್ನು ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

“ಮಮತಾ ಬ್ಯಾನರ್ಜಿ ಅವರು ಯಾವುದೇ ಸಮೀಕ್ಷೆಯಿಲ್ಲದೆ 118 ಮುಸ್ಲಿಂ ಜಾತಿಗಳಿಗೆ ಒಬಿಸಿ ಮೀಸಲಾತಿ ನೀಡಿದರು. ಯಾರೋ ನ್ಯಾಯಾಲಯಕ್ಕೆ ಹೋದರು, ನ್ಯಾಯಾಲಯವು ಇದನ್ನು ಅರಿತು 2010 ಮತ್ತು 2024 ರ ನಡುವೆ ನೀಡಲಾದ ಎಲ್ಲಾ ಪ್ರಮಾಣಪತ್ರಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಮಮತಾ ಬ್ಯಾನರ್ಜಿ ಅವರು ಮೀಸಲಾತಿಯನ್ನು ದೋಚಲು ಬಯಸಿದ್ದಾರೆ. ನಾನು ಹೈಕೋರ್ಟ್‌ನ ತೀರ್ಪನ್ನು ಸ್ವಾಗತಿಸುತ್ತೇನೆ. ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!