ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳಿ ನಟಿ ಉಮಾ ದಾಸ್‌ಗುಪ್ತಾ ನಿಧನರಾಗಿದ್ದಾರೆ. ನಟಿಯ ನಿಧನಕ್ಕೆ ಚಿತ್ರರಂಗದ ನಟ, ನಟಿಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಉಮಾ ದಾಸ್‌ಗುಪ್ತಾ ಅವರು ಕಳೆದ ಕೆಲವು ವರ್ಷಗಳಿಂದ ಕಾನ್ಸರ್‌ನಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆ ಪಡೆಯುತ್ತಿದರು. ಇದೀಗ ಚಿಕಿತ್ಸೆ ಫಲಿಸದೇ ಉಮಾ ನ.18ರ ಬೆಳಿಗ್ಗೆ 8 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.
‘ಪಥೇರ್ ಪಾಂಚಾಲಿ’ ಚಿತ್ರದಲ್ಲಿ ದುರ್ಗಾ ಪಾತ್ರದಲ್ಲಿ ಮಿಂಚಿದ್ದರು. ಅಂದಹಾಗೆ,’ಪಥೇರ್ ಪಾಂಚಾಲಿ’ ಹೆಸರಿನ ಬಂಗಾಳಿ ಕಾದಂಬರಿಯನ್ನೇ ನಿರ್ದೇಶಕ ಸತ್ಯಜಿತ್ ರೇ ಸಿನಿಮಾ ಮಾಡಿದ್ದರು. ಇದು ಅವರ ಚೊಚ್ಚಲ ಚಿತ್ರವಾಗಿತ್ತು. 1955ರಲ್ಲಿ ಚಿತ್ರ ಬಿಡುಗಡೆಯಾದ ನಂತರ ದೊಡ್ಡ ಮೆಚ್ಚುಗೆಯನ್ನು ಪಡೆಯಿತು. ಈ ಚಿತ್ರವನ್ನು ಆಗಿನ ಪಶ್ಚಿಮ ಬಂಗಾಳ ಸರ್ಕಾರವೇ ನಿರ್ಮಾಣ ಮಾಡಿತ್ತು. ಉಮಾ ಅವರ ಜೊತೆಗೆ ಸುಬೀರ್ ಬ್ಯಾನರ್ಜಿ, ಕನು ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಪಿನಕಿ ಸೇನ್‌ಗುಪ್ತ ಮುಖ್ಯಭೂಮಿಕೆಯಲ್ಲಿದ್ದರು. ಇದರ ನಂತರ ಉಮಾ ಹಲವು ಸಿನಿಮಾಗಳಲ್ಲಿ ನಟಿಸಿದರು.