ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚುವರಿ 5,000 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಒಳಗೊಂಡ 50 CAPF ತುಕಡಿಗಳನ್ನು ಮಣಿಪುರಕ್ಕೆ ಕಳುಹಿಸಲು ಕೇಂದ್ರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಜಿರಿಬಾಮ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇತರ ಸ್ಥಳಗಳಿಗೆ ಹರಡಿದ ನಂತರ ನವೆಂಬರ್ 12 ರಂದು ಕೇಂದ್ರ ಗೃಹ ಸಚಿವಾಲಯ(MHA) 20 ಹೆಚ್ಚುವರಿ CAPF ಪಡೆಗಳನ್ನು ಮಣಿಪುರಕ್ಕೆ ರವಾನಿಸಿತ್ತು. ಸಿಆರ್‌ಪಿಎಫ್‌ನಿಂದ 15 ಮತ್ತು ಬಿಎಸ್‌ಎಫ್‌ನಿಂದ ಐದು ತುಕಡಿಗಳನ್ನು ರಾಜ್ಯಕ್ಕೆ ರವಾನಿಸಿತ್ತು.
ಈ ವಾರದೊಳಗೆ ಹೆಚ್ಚುವರಿಯಾಗಿ ಮತ್ತೆ 50 ತುಕಡಿಗಳನ್ನು ಮಣಿಪುರಕ್ಕೆ ಧಾವಿಸುವಂತೆ ಆದೇಶಿಸಲಾಗಿದೆ. 35 ತುಕಡಿಗಳನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯಿಂದ ಪಡೆಯಲಾಗುವುದು. ಉಳಿದ 15 ತುಕಡಿಗಳನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯಿಂದ ಪಡೆಯಲಾಗುವುದು.
ಸಿಆರ್‌ಪಿಎಫ್ ಮಹಾನಿರ್ದೇಶಕ (ಸಿಆರ್‌ಪಿಎಫ್) ಎ ಡಿ ಸಿಂಗ್ ಮತ್ತು ಇತರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಹಿರಿಯ ಅಧಿಕಾರಿಗಳು ರಾಜ್ಯದಲ್ಲಿದ್ದಾ ಮುಕ್ಕಾಂ ಹೂಡಿದ್ದಾರೆ.