ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೋ ಕಬಡ್ಡಿ ಟೂರ್ನಿಯ 8ನೇ ಆವೃತ್ತಿಯಲ್ಲಿ ಪಿಂಕ್ ಪ್ಯಾಂಥರ್ಸ್ ಅನ್ನು ಸೋಲಿಸಿ ಬೆಂಗಳೂರು ಬುಲ್ಸ್ ಐದನೇ ಗೆಲುವು ಸಾಧಿಸುವ ಮೂಲಕ ಅಗ್ರಸ್ಥಾನಕ್ಕೇರಿದೆ.
ಬೆಂಗಳೂರು ಬುಲ್ಸ್ ತಂಡ ಆಡಿದ 7 ಪಂದ್ಯಗಳಲ್ಲಿ, 1 ಸೋಲು, 1 ಡ್ರಾ ಆಗಿದ್ದು, ಉಳಿದ ಐದು ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಈ ಮೂಲಕ ತಂಡ 28 ಅಂಕ ಗಳಿಸಿದೆ.
ಮೊದಲ ಪಂದ್ಯದಲ್ಲಿ ಸೋತಿದ್ದ ಬೆಂಗಳೂರು ಬುಲ್ಸ್ ಬಳಿಕ ರೊಚ್ಚಿಗೆದ್ದು ಭರ್ಜರಿ ಪ್ರದರ್ಶನ ನೀಡುತ್ತಿದೆ. ಇನ್ನು ಬೆಂಗಳೂರು ಬುಲ್ಸ್ ತಂಡದ ಕ್ಯಾಪ್ಟನ್ ಪವನ್ ಕುಮಾರ್ ಭರ್ಜರಿ ರೈಡಿಂಗ್ ಮಾಡುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. 13 ರೈಡ್ ಗಳಲ್ಲಿ 1 ಟ್ಯಾಕಲ್, 4 ಬೋನಸ್ ಸೇರಿ ಒಟ್ಟು 18 ಅಂಕ ಗಳಿಸಿಕೊಟ್ಟಿದ್ದಾರೆ. ಜತೆಗೆ ತಂಡದ ದೀಪಕ್ ನರ್ವಾಲ್, ಸೌರಭ್ ನಡಲ್ ಹಾಗೂ ಮೊರೆ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಈ ಮೂಲಕ ತಂಡ 26 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದ್ದು, ದಿಲ್ಲಿ ತಂಡ ಎರಡನೇ ಸ್ಥಾನಕ್ಕೆ ಇಳಿದರೆ, ಪಟ್ನಾ ಮೂರನೇ ಸ್ಥಾನದಲ್ಲಿದೆ.