ಮಹಿಳೆ ಬಸ್‌ ನಲ್ಲಿ ಬಿಟ್ಟಿದ್ದ ಹಣ, ಮೊಬೈಲ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಿಎಂಟಿಸಿ ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಯಾಣಿಕರೊಬ್ಬರು ಬಿಟ್ಟು ಹೋದ ಪರ್ಸ್ ಅನ್ನು ಹಿಂದಿರುಗಿಸಿದ ಬಸ್ ಸಿಬ್ಬಂದಿಗೆ ಬಿಎಂಟಿಸಿ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರವನ್ನು ನೀಡಿದೆ.
ಡಿಸೆಂಬರ್ 6 ರಂದು ವಜ್ರ (ಎಸಿ ವೋಲ್ವೋ) ಬಸ್ (ಕೆಎ 57 ಎಫ್ 1807) ನಲ್ಲಿ ಬನ್ನೇರುಘಟ್ಟ ರಸ್ತೆಗೆ ತೆರಳುತ್ತಿದ್ದ ಮಹಿಳೆಯೊಬ್ಬರು 15 ಸಾವಿರ ನಗದು ಮತ್ತು ಸ್ಮಾರ್ಟ್ ಫೋನ್ ಹೊಂದಿರುವ ಪರ್ಸ್ ಬಿಟ್ಟು ಹೋಗಿದ್ದರು. ಬಸ್ ಸಿಬ್ಬಂದಿಯಾದ ಕಂಡಕ್ಟರ್ ಮಹೇಶ್ ಬಾಬು ಮತ್ತು ಚಾಲಕ ಹರೀಶ್ – ಸುರಕ್ಷಿತವಾಗಿರಿಸಲು ಪರ್ಸ್ ಅನ್ನು ತೆಗೆದುಕೊಂಡರು. ಬಳಿಕ ಪರ್ಸ್‌ನಲ್ಲಿ ಪತ್ತೆಯಾದ ಗುರುತಿನ ಚೀಟಿಗಳ ಆಧಾರದ ಮೇಲೆ ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಮಹಿಳೆ ಪರ್ಸ್ ತೆಗೆದುಕೊಳ್ಳಲು ತನ್ನ ಸಹೋದರನನ್ನು ಸುಭಾಷ್ ನಗರದಲ್ಲಿರುವ ಬಿಎಂಟಿಸಿಯ ಡಿಪೋ ಸಂಖ್ಯೆ 7ಕ್ಕೆ ಕಳುಹಿಸಿದ್ದರು.
ಸಿಬ್ಬಂದಿಯ ಅನುಕರಣೀಯ ನಡವಳಿಕೆಯನ್ನು ಗಮನಿಸಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಅವರು ಚಾಲಕ ಹಾಗೂ ಕಂಡೆಕ್ಟರ್‌ ಗೆ ತಲಾ 500 ರೂಪಾಯಿ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರವನ್ನು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!