VIRAL VIDEO| ಬೋರ್ಡಿಂಗ್ ಪಾಸ್ ಇದ್ದರೂ ನಾಯಿಗೆ ವಿಮಾನದಲ್ಲಿ ಪ್ರವೇಶ ನಿರಾಕರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು ಮೂಲದ ಕುಟುಂಬವೊಂದು ಏರ್ ಇಂಡಿಯಾ ಸಿಬ್ಬಂದಿ ತಮ್ಮ ಸಾಕು ನಾಯಿಗೆ ವಿಮಾನದಲ್ಲಿ ಪ್ರವೇಶ ನಿರಾಕರಿಸಿದ್ದಾಗಿ  ಆರೋಪಿಸಿ ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬೋರ್ಡಿಂಗ್ ಪಾಸ್ ಹೊಂದಿದ್ದರೂ ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ನಾಯಿಯನ್ನು ಒಳಗೆ ಬಿಡಲಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸಚಿನ್ ಶೆಣೈ ಎಂಬುವವರ ಕುಟುಂಬ ಬೆಂಗಳೂರಿನಿಂದ ದೆಹಲಿಗೆ ಹೋಗಿ ಅಲ್ಲಿಂದ ಅಮೃತ್ ಸರ್ ಬಳಿಗೆ ಹೋಗಬೇಕಾದ ಸಂದರ್ಭ ಈ ಘಟನೆ ನಡೆದಿದೆ. ಅವರು ತಮ್ಮ ಪ್ರಯಾಣದಲ್ಲಿ ತಮ್ಮ ಸಾಕು ನಾಯಿಯನ್ನು ಕರೆದೊಯ್ಯಲು ಬಯಸಿದ್ದು, ಏರ್ ಇಂಡಿಯಾ ನಿಯಮಗಳ ಪ್ರಕಾರ ಎಲ್ಲಾ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ್ದೇವೆ ಬೋರ್ಡಿಂಗ್ ಪಾಸ್ ಕೂಡ ನಾವು ತೆಗೆದುಕೊಂಡೆವು ಆದರೆ, ಈಗ ನಾಯಿ ಬಿಟ್ಟು ತಮ್ಮನ್ನು ಮಾತ್ರ ವಿಮಾನ ಹತ್ತಲು ಹೇಳುತ್ತಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!