October 11, 2026
Sunday, October 11, 2026
spot_img

UPI ಬಳಕೆದಾರರಿಗೆ ಗುಡ್‌ನ್ಯೂಸ್: 2,000 ರೂ. ವರೆಗಿನ ಪೇಮೆಂಟ್‌ ಗೆ ಶುಲ್ಕವಿಲ್ಲ; ಕೇಂದ್ರದ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಟ್ಯಂತರ ಭಾರತೀಯರ ದೈನಂದಿನ ಜೀವನದ ಭಾಗವಾಗಿರುವ UPI ಪೇಮೆಂಟ್‌ ವಹಿವಾಟುಗಳಿಗೆ ಶುಲ್ಕ ವಿಧಿಸುವ ಕುರಿತು ಶುರುವಾಗಿರೋ ಚರ್ಚೆ ಬಳಕೆದಾರರಲ್ಲಿ ಗೊಂದಲ ಮೂಡಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಹಣಕಾಸು ಸಚಿವಾಲಯ ಸೆಪ್ಟೆಂಬರ್ 14ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, 2,000 ರೂ.ವರೆಗೆ ನಡೆಯೋ UPI ವಹಿವಾಟುಗಳಿಗೆ ಬ್ಯಾಂಕ್‌ಗಳು ಅಥವಾ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಯಾವುದೇ ಶುಲ್ಕ ವಿಧಿಸುವಂತಿಲ್ಲ. ಇದೇ ನಿಯಮ RuPay ಡೆಬಿಟ್ ಕಾರ್ಡ್ ಮೂಲಕ ನಡೆಯುವ ಪಾವತಿಗಳಿಗೂ ಅನ್ವಯಿಸುತ್ತದೆ ಎಂದು ಅಧಿಸೂಚನೆ ಹೇಳಿದೆ.

ಇದನ್ನೂ ಓದಿ:

ಹಾಗಾದರೆ 2,500, 5,000 ಅಥವಾ 20,000 ರೂ ಪಾವತಿಸಿದರೆ ಶುಲ್ಕ ಕಟ್ಟಬೇಕಾ ಅನ್ನೋ ಪ್ರಶ್ನೆ ಸಹಜ. ಆದರೆ ಸದ್ಯಕ್ಕೆ 2,000 ಮೀರಿದ UPI ಪಾವತಿಗಳಿಗೆ ಗ್ರಾಹಕರಿಂದ ಸ್ವಯಂಚಾಲಿತವಾಗಿ ಶುಲ್ಕ ವಿಧಿಸುವ ಯಾವುದೇ ನಿಯಮ ಜಾರಿಗೆ ಬಂದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಇಲ್ಲಿ MDR ಅಂದರೆ Merchant Discount Rate ಪ್ರಮುಖವಾಗುತ್ತದೆ. ಭವಿಷ್ಯದಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮೊತ್ತದ ವಹಿವಾಟು ಸ್ವೀಕರಿಸುವ ಕೆಲವು ವ್ಯಾಪಾರಿಗಳಿಗೆ ಸಣ್ಣ ಪ್ರಮಾಣದ MDR ವಿಧಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ನೋ ಟೆನ್ಶನ್

ಬೀದಿ ಬದಿ ವ್ಯಾಪಾರಿಗಳು, ಸಣ್ಣ ಅಂಗಡಿಯವರು, ಟ್ಯಾಕ್ಸಿ ಚಾಲಕರು ಮತ್ತು ಸಾಮಾನ್ಯ ಗ್ರಾಹಕರಿಗೆ ಯುಪಿಐ ಸೇವೆ ಸಂಪೂರ್ಣ ಉಚಿತವಾಗಿ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

Must Read