ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- ಈ ಮೂರು ಕಡೆಗಳಲ್ಲಿ ಚಿತ್ರ ಪ್ರದರ್ಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾ.3ರಿಂದ ಆರಂಭವಾಗಲಿದ್ದು,ಈ ಬಾರಿಯೂ ಮೂರು ಸೆಂಟರ್‌ ಗಳಲ್ಲಿ ಚಿತ್ರಗಳ ಪ್ರದರ್ಶನ ನಡೆಯಲಿದೆ.
ಈ ವರ್ಷ ಚಲನಚಿತ್ರೋತ್ಸವದಲ್ಲಿ 55 ರಾಷ್ಟ್ರಗಳ 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಎಂದಿನಂತೆ ಈ ಬಾರಿ ಪಿವಿಆರ್‌ ಸಿನಿಮಾಸ್‌ ಒರಯಾನ್‌ ಮಾಲ್‌- ರಾಜಾಜಿನಗರ, ಕಲಾವಿದರ ಸಂಘ- ಚಾಮರಾಜಪೇಟೆ, ಸುಚಿತ್ರ ಸಿನಿ ಅಕಾಡೆಮಿ ಬನಶಂಕರಿಯಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್‌ ಪುರಾಣಿಕ್‌ ತಿಳಿಸಿದ್ದಾರೆ.
75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ಆಧರಿಸಿದ ಚಿತ್ರಗಳು ಪ್ರದರ್ಶನಗೊಳ್ಳಲಿದೆ.
ಇಂದಿನಿಂದ ಆನ್‌ ಲೈನ್‌ ನೋಂದಣಿ ಆರಂಭವಾಗಿದ್ದು, ನೇರವಾಗಿಯೂ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದು, ಸಾರ್ವಜನಿಕರಿಗೆ 800ರೂ. ನಿಗದಿಯಾಗಿದರೆ, ಗಣ್ಯರಿಗೆ 400ರೂ. ಎಂದು ನಿಗದಿ ಪಡಿಸಲಾಗಿದೆ.
ಈ ವರ್ಷ ಅಂತಾರಾಷ್ಟ್ರೀಯ ಫೆಡರೇಶನ್‌ ಆಫಗ ಫಿಲಂ ಪ್ರೊಡ್ಯೂಸರ್ಸ್‌ ಅಸೋಸಿಯೇಷನ್‌ ನಿಂದ ಬೆಂಗಳೂರು ಚಲನಚಿತ್ರೋತ್ಸವ ಮಾನ್ಯತೆ ಪಡೆದಿದೆ. ಇದು ಮಾನ್ಯತೆ ಪಡೆದ ವಿಶ್ವದ 46ನೇ ಚಲನಚಿತ್ರೋತ್ಸವವಾಗಿದೆ.
ಮಾ.3ರಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!