ಹೊಸ ದಿಗಂತ ಡಿಜಿಟಲ್ ಡೆಸ್ಕ್
ನದಿಗಳಿಗೆ ಆರತಿ ಮಾಡುವ ಕ್ರಮ ಬಹುತೇಕರಿಗೆ ಪರಿಚಿತ. ಕೆರೆಯ ವಿಚಾರದಲ್ಲೂ ಹೀಗೊಂದು ಉದಾಹರಣೆ ಬೆಂಗಳೂರಿನ ಅಕ್ಷಯ ನಗರದ್ದು.
ನಗರದ ಬನ್ನೇರುಘಟ್ಟ ರಸ್ತೆಯ ಅಕ್ಷಯ ನಗರ ಕೆರೆಯ ವಾರ್ಷಿಕ ಗಂಗಾ ಆರತಿ ಕಾರ್ಯಕ್ರಮ ಡಿಸೆಂಬರ 17 ಭಾನುವಾರ ಸಂಜೆ 4 ಗಂಟೆಯಿಂದ ನಡೆಯಲಿದೆ.
ಸ್ಥಳೀಯರ ಸತತ ಪರಿಶ್ರಮದಿಂದ ಪುನರುಜ್ಜೀವನಗೊಂಡ ಅಕ್ಷಯ ನಗರ ಕೆರೆಗೆ ಕಳೆದ 7 ವರ್ಷಗಳಿಂದ ಗಂಗಾ ಆರತಿ ಕಾರ್ಯಕ್ರಮ ನಡೆಯುತ್ತಿದೆ. ಪ್ರಕೃತಿಯನ್ನು ಆರಾಧಿಸುವ ಹಾಗೂ ಜಲವನ್ನು ಪೂಜಿಸುವ ನಿಟ್ಟಿನಲ್ಲಿ ಅಕ್ಷಯ ನಗರ ಜಲನಿಧಿ ತಂಡ ಸ್ಥಳೀಯರ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದೆ.
ಜಲವನ್ನು ಮತ್ತು ಜಲ ಮೂಲಗಳನ್ನು ಸ್ವಚ್ಚವಾಗಿ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳಬೇಕು ಅನ್ನುವುದರ ಸಂಕೇತವಾಗಿ ಸ್ಥಳೀಯರು ಪ್ರಾರಂಭಿಸಿದ ಆಚರಣೆ ಇಂದು ವಾರ್ಷಿಕ ಸಂಪ್ರದಾಯವಾಗಿ ಸ್ಥಳೀಯರ ಪರಿಸರ ಸಂರಕ್ಷಣೆ ಕಾಳಜಿಯನ್ನು ಸಂಕೇತಿಸುತ್ತದೆ. 5.5 ಎಕರೆ ವಿಸ್ತೀರ್ಣದ ಕೆರೆಯ ಸುತ್ತ ಹಣತೆ ದೀಪಗಳನ್ನು ಬೆಳಗಿಸಿ , ಪವಿತ್ರ ಜಲಕ್ಕೆ ಆರತಿ ಬೆಳಗುವ ವಿಶೇಷ ಸಂಪ್ರದಾಯ ಇದಾಗಿದೆ.