ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಾವ ಹತ್ಯೆ ಪ್ರಕರಣ: ಓರ್ವ ಆರೋಪಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwar) ಅವರ ಬಾವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ .

ಆರೋಪಿ ಮುರುಗನ್ ಎಂಬಾತನನ್ನು ಪೊಲೀಸರು ತಮಿಳುನಾಡಿನಲ್ಲಿ (TamilNadu) ಬಂಧಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮಹದೇವಯ್ಯ (Mahadevaiah) ಅವರ ಪಕ್ಕದ ತೋಟದಲ್ಲಿಯೇ ಕೂಲಿ ಕೆಲಸ ಮಾಡ್ತಿದ್ದ ಮುರುಗನ್. ಮಹದೇವಯ್ಯ ಬಳಿ ಹಣ ಇರೋದನ್ನ ಗಮನಿಸಿ ಕುಟುಂಬಸ್ಥರ ಜೊತೆ ಸೇರಿ ಮಹದೇವಯ್ಯ ಹತ್ಯೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿತು.

ಹಣದ ಅವಶ್ಯಕತೆಯಿದ್ದುದರಿಂದ ಇತರರೊಂದಿಗೆ ಸೇರಿ ಮಹದೇವಯ್ಯನನ್ನ ಹತ್ಯೆ ಮಾಡಿರುವುದು ನಂತರ ಗೊತ್ತಾಗಿದೆ. ಇದೀಗ ಆರೋಪಿ ಮುರುಗನ್‌ನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಡಿಸೆಂಬರ್ 1ರ ರಾತ್ರಿ ಮಹದೇವಯ್ಯ ಅವರು ಚನ್ನಪಟ್ಟಣ ತೋಟದ ಮನೆಯಲ್ಲಿದ್ದರು. ಮಧ್ಯರಾತ್ರಿ 12 ಗಂಟೆಗೆ ತೋಟದ ಮನೆಗೆ ನುಗ್ಗಿದ ಮೂವರು ಅಪರಿಚಿತರು, ಬಳಿಕ ಮನೆಯಲ್ಲಿ ಲಾಕರ್ ಓಪನ್ ಮಾಡಿಸಿ ಪತ್ರ ದುಡ್ಡು ಕೊಂಡೊಯ್ದಿರುವ ಶಂಕೆ ವ್ಯಕ್ತವಾಗಿತ್ತು. ಇ
ಹಂತಕರು ಮಹದೇವಯ್ಯ ಅವರನ್ನು ಕಾರಿನಲ್ಲೇ ಕರೆದುಕೊಂಡು ಚನ್ನಪಟ್ಟಣದಿಂದ ಚಾಮರಾಜನಗರ ಜಿಲ್ಲೆಗೆ ಬಂದಿದ್ದು, ಬಳಿಕ ಕೊಳ್ಳೇಗಾಲದ ಬಳಿ ಹಂತಕರು ಡಾಬಾದಲ್ಲಿ ಪಾರ್ಟಿ ಮಾಡಿ ನಂತರ ಅದೇ ಮಾರ್ಗದ ಅಂಗಡಿಯಲ್ಲಿ ನೀರಿನ ಬಾಟ್ಲಿ ಖರೀದಿ ಮಾಡಿರುವ ಅನುಮಾನ ಹುಟ್ಟಿತ್ತು. ಇದಾದ ಬಳಿಕ ಹನೂರು ತಾಲೂಕಿ ನಾಲಾರೋಡ್ ಬಳಿಗೆ ಬಂದು ಕೊಲೆ ಮಾಡಿ ಅರಣ್ಯ ಪ್ರದೇಶದಲ್ಲಿ ಬಿಸಾಕಿ, ಬೆಳಗ್ಗೆ 5 ಗಂಟೆಗೆ ಹನೂರಿನ ರಾಮಾಪುರದಲ್ಲಿ ಕಾರು ನಿಲ್ಲಿಸಿರುವ ಹಂತಕರು, ಡಿ.2ರ ಬೆಳಗ್ಗೆ 5.15ಕ್ಕೆ ರಾಮಾಪುರದ ಮುಖ್ಯರಸ್ತೆಯಲ್ಲಿ ಟೀ ಕುಡಿದು ಹೋಗಿರುವ ಶಂಕೆ ವ್ಯಕ್ತವಾಗಿತ್ತು.ಪ್ರಕರಣ ಕುರಿತು ಎಲ್ಲಾ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿ ತನಿಖೆ ನಡೆಸುತ್ತಿದ್ದರು. ಇದಾದ ಕೆಲ ದಿನಗಳಲ್ಲಿ ತಮಿಳುನಾಡಿನ ಗಡಿ ಭಾಗದಲ್ಲಿ ಮಹದೇವಯ್ಯ ಶವ ಪತ್ತೆಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!