ಇಂಗ್ಲೆಂಡ್‌ಗೆ ಸಂಕಷ್ಟ, ಬರ್ಮಿಂಗ್‌ಹ್ಯಾಮ್ ನಗರದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ಇದೀಗ ಸಂಕಷ್ಟದಲ್ಲಿದ್ದು, ದೇಶದ ದೊಡ್ಡ ನಗರಿ ಬರ್ಮಿಂಗ್‌ಹ್ಯಾಮ್ ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ಬರ್ಮಿಂಗ್‌ಹ್ಯಾಮ್ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿಕೊಂಡಿದೆ. ಇದೀಗ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನೆಲ್ಲಾ ವೆಚ್ಚವನ್ನು ನಿರ್ಬಂಧಿಸಲಾಗಿದೆ.

ಬಜೆಟ್ ಸಮತೋಲನಗೊಳಿಸಲು ಸಾಧ್ಯವಾಗುತ್ತಿಲ್ಲ. 2010ರಿಂದ ಬಂದ ಸರ್ಕಾರದ ನೀತಿಯಿಂದ ಇಷ್ಟೆಲ್ಲಾ ಸಮಸ್ಯೆ ಎದುರಾಗಿದೆ. ಬಜೆಟ್‌ನಲ್ಲಿ 1.25 ಶತಕೋಟಿ ಡಾಲರ್ ಕಡಿತಗೊಳಿಸಿರುವುದು ಇಷ್ಟೆಲ್ಲಾ ತೊಂದರೆಯಾಗಲು ಕಾರಣ ಎಂದು ಸ್ಥಳೀಯ ಆಡಳಿತ ಹೇಳಿದೆ.

ಜನರ ಆದಾಯ ಹಾಗೂ ವೆಚ್ಚಗಳಿಗೆ ಸರಿಯಾಗಿ ಹೊಂದಿಕೆ ಆಗುತ್ತಿಲ್ಲ. ಅಗತ್ಯ ವಸ್ತುಗಳನ್ನು ಮುಟ್ಟಲೂ ಆಗುತ್ತಿಲ್ಲ. ತುರ್ತು ಘೋಷಣೆ ಸರಿಯಾದ ಕ್ರಮವಾಗಿದೆ ಎಂದು ಕಾರ್ಮಿಕ ಮುಖಂಡರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!