ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗವು ಇದೇ ಡಿಸೆಂಬರ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಹೇಳಿದೆ. ಈ ಮಾರ್ಗವು ಬೊಮ್ಮಸಂದ್ರವನ್ನು ಆರ್‌ವಿ ರಸ್ತೆಯೊಂದಿಗೆ ಸಂಪರ್ಕಿಸಲಿದ್ದು, ಡಿಸೆಂಬರ್ 2023ರೊಳಗೆ ಪೂರ್ಣವಾಗಲಿದೆ.
ಬೆಂಗಳೂರು ಮೆಟ್ರೋ ಹಳದಿ ಮಾರ್ಗವು ಸಾವಿರಾರು ಐಟಿ ಉದ್ಯೋಗಿಗಳಿಗೆ ಯಾವುದೇ ಟ್ರಾಫಿಕ್ ಜಾಮ್ ಅನ್ನು ಎದುರಿಸದೆ ಕೆಲಸಕ್ಕೆ ಹೋಗಲು ಸಹಾಯ ಮಾಡುತ್ತದೆ. ನಗರದಲ್ಲಿ ವಾಸಿಸುವವರು ಮಾತ್ರವಲ್ಲದೆ ನಗರಕ್ಕೆ ಆಗಮಿಸುವ ಹೊರಗಿನವರಿಗೂ ಬೆಂಗಳೂರಿನ ಯಾವುದೇ ಮೂಲೆಗಳಿಗೆ ಸುಲಭವಾಗಿ ಪ್ರಯಾಣಿಸಲು ನಮ್ಮ ಮೆಟ್ರೋ ನೆರವಾಗುತ್ತದೆ.