ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟ್ಯಂತರ ಜನರಿಗೆ ಆಶ್ರಯ ನೀಡಿರುವ ನಮ್ಮ ರಾಜಧಾನಿ ಬೆಂಗಳೂರು ಇದೀಗ ಟ್ರಾಫಿಕ್ ವಿಚಾರವಾಗಿ ಮತ್ತೆ ಸುದ್ದಿಯಾಗಿದೆ. ಸಂಸ್ಥೆಯೊಂದು ನಡೆಸಿದ ಟ್ರಾಫಿಕ್ ಇಂಡೆಕ್ಸ್‌ನಲ್ಲಿ ಭಾರತದಲ್ಲೇ ಅತಿ ಹೆಚ್ಚು ಟ್ರಾಫಿಕ್ ಬೆಂಗಳೂರಿನಲ್ಲಿದೆ ಎಂದು ಹೇಳಲಾಗಿದೆ.
ಟಾಮ್ ಟಾಮ್ ಸಂಸ್ಥೆ ನಡೆಸಿದ ಟ್ರಾಫಿಕ್ ಇಂಡೆಕ್ಸ್‌ನಲ್ಲಿ ಟ್ರಾಫಿಕ್ ವಿಚಾರವಾಗಿ ಇಡೀ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ. ನಗರದಲ್ಲಿ ಕೇವಲ 10 ಕಿಲೋಮೀಟರ್ ದೂರ ಕ್ರಮಿಸಲು ಸವಾರರು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತಾರೆ. ಬೆಂಗಳೂರಿನ ವಾಹನ ಸವಾರರು ಕೇವಲ ಪೀಕ್ ಅವರ್ಸ್ (ರಶ್ ಅವರ್) ಟ್ರಾಫಿಕ್‌ನಲ್ಲಿ ಸಿಲುಕಿ ವರ್ಷಕ್ಕೆ ಬರೋಬ್ಬರಿ 168 ಗಂಟೆಗಳನ್ನು ಅಂದರೆ ಸುಮಾರು 7 ದಿನಗಳು ರಸ್ತೆಯಲ್ಲೇ ಕಳೆಯುತ್ತಾರೆ ಅನ್ನೋ ಶಾಕಿಂಗ್ ಅಂಶ ಕೂಡ ಬಯಲಾಗಿದೆ. ರಶ್ ಅವರ್‌ನಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ ಕೇವಲ 13.9 ಕಿ.ಮೀಗೆ ಇಳಿಯುತ್ತದೆ. ಇದು 2024ಕ್ಕೆ ಹೋಲಿಕೆ ಮಾಡಿದ್ರೆ, 2025ಕ್ಕೆ ಭಾರಿ ಏರಿಕೆಯಾಗಿದೆ. ಮುಂದನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಎರಡನೇ ಸ್ಥಾನದಲ್ಲಿ ಕೊಲ್ಕತ್ತಾ
ಕೊಲ್ತತ್ತಾದ ಪುಣೆಯಲ್ಲಿ ಪುಣೆಯಲ್ಲಿ 10 ಕಿಮೀ ಸಾಗಲು 33.20 ನಿಮಿಷ ಬೇಕಾಗ್ತಿದ್ದು, ಇದರಿಂದ ಮೂರನೇ ಸ್ಥಾನ ಪಡೆದುಕೊಂಡಿದೆ. ನ್ಯಾವಿಗೇಷನ್ ಟೆಕ್ನಾಲಜಿ ಕಂಪನಿಯಾದ ಟಾಮ್ ಟಾಮ್ ವಿಶ್ವದ ಬೇರೆಬೇರೆ ನಗರಗಳ ಸಂಚಾರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಪ್ರತಿ ವರ್ಷ ಟ್ರಾಫಿಕ್ ಇಂಡೆಕ್ಸ್ ಪ್ರಕಟಿಸುತ್ತದೆ. 2025ರ ವರದಿಯಲ್ಲಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವಾಗಿದೆ ಎಂದು ವರದಿ ಬಿಡುಗಡೆ ಮಾಡಿದೆ.
ಟ್ರಾಫಿಕ್ ತಡೆಗಟ್ಟಲು ಏನು ಮಾಡಬಹುದು?
ಬೆಂಗಳೂರಿನ ಜನರ ಮನೆಗಳ ಪಾರ್ಕಿಂಗ್‌ನಲ್ಲಿ, ಮನೆಯ ಹೊರಗೆ ಎಷ್ಟು ಗಾಡಿಗಳಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಿತ್ಯವೂ ಆಫೀಸ್‌ಗೆ ತೆರಳುವವರು ಕಾರ್‌ಪೂಲಿಂಗ್, ಮೆಟ್ರೋ ಅಥವಾ ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ. ಆಫೀಸ್ ಅಥವಾ ಅತ್ಯಾವಶ್ಯಕ ಕೆಲವನ್ನು ಹೊರತುಪಡಿಸಿ ಹೊರಗೆ ಹೋಗುವವರು ಆದಷ್ಟು ಪೀಕ್ ಅವರ್‌ಗಳ ಓಡಾಟ ತಪ್ಪಿಸಿ. ಬೆಳಗ್ಗೆ ಶಾಲಾ, ಕಾಲೇಜುಗಳಿಗೆ ತೆರಳುವ ವಾಹನಗಳು ಇರುತ್ತವೆ. ಇನ್ನು ಆಫೀಸಿಗೆ ಹೋಗುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಈ ಸಮಯ ಹಾಗೂ ವಾಪಾಸ್ ಮನೆಗೆ ಬರುವ ಸಮಯ ಹೊರತುಪಡಿಸಿ ಓಡಾಟ ನಡೆಸುವುದು ಸೂಕ್ತವಾಗಿದೆ.



