ಬೆಂಗಳೂರು ಟ್ರಾಫಿಕ್ ಜಾಮ್ : ಆಂಬುಲೆನ್ಸ್‌ನಲ್ಲಿದ್ದ ಮಗು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಆಂಬುಲೆನ್ಸ್ ಸಿಕ್ಕಿಹಾಕಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಒಂದೂವರೆ ವರ್ಷದ ಮಗು, ಆಂಬುಲೆನ್ಸ್‌ನಲ್ಲಿಯೇ ಮೃತಪಟ್ಟಿದೆ.

ಹಾಸನದಿಂದ ಬೆಂಗಳೂರಿಗೆ ಮಗುವನ್ನು ಕರೆದುಕೊಂಡು ಆಂಬುಲೆನ್ಸ್ ಬರುತ್ತಿತ್ತು. ಈ ಮಧ್ಯೆ ನೆಲಮಂಗಲದಿಂದ ಗುರುಗುಂಟೆಪಾಳ್ಯದವರೆಗೆ ಉಂಟಾಗಿದ್ದ ಟ್ರಾಫಿಕ್ ಜಾಮ್‌ನಲ್ಲಿ ಆಂಬುಲೆನ್ಸ್ ಸಿಕ್ಕಿಹಾಕಿಕೊಂಡಿತ್ತು.

ಹಾಸನದಲ್ಲಿ ಗುರುವಾರ ಅಪಘಾತ ಸಂಭವಿಸಿದ್ದು, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಕರೆತರಲಾಗುತ್ತಿತ್ತು. ಹಾಸನದಿಂದ ಹೊರಡುವ ಮುನ್ನವೇ ಆಂಬುಲೆನ್ಸ್ ಚಾಲಕ ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟ್ ಒಂದನ್ನು ಮಾಡಿದ್ದರು. ಮಗುವನ್ನು ಕರೆದುಕೊಂಡು ಬರುತ್ತಿದ್ದೇವೆ, ಆಸ್ಪತ್ರೆಗೆ ತೆರಳಲು ಟ್ರಾಫಿಕ್ ಮುಕ್ತ ಹಾಗೂ ಸಿಗ್ನಲ್ ಮುಕ್ತ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿದ್ದರು. ಟ್ರಾಫಿಕ್‌ನಿಂದಾಗಿ ನಿಗದಿತ ಸಮಯಕ್ಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಲಿಲ್ಲ ಎಂದು ಕುಟುಂಬಸ್ತರು ಸ್ಥಳೀಯರು ದೂರಿದ್ದಾರೆ.

ದಯವಿಟ್ಟು ಆಂಬುಲೆನ್ಸ್‌ಗಳಿಗೆ ಆದ್ಯತೆ ನೀಡಿ, ನೀವು ಆಫೀಸ್‌ಗೆ ತೆರಳಲು ಲೇಟ್ ಆದರೆ ಯಾರ ಪ್ರಾಣವೂ ಹೋಗುವುದಿಲ್ಲ. ಆದರೆ ಆಂಬುಲೆನ್ಸ್‌ನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುವ ಜೀವ ಇರಬಹುದು. ಆ ಜೀವ ಮುಂದೊಂದು ದಿನ ನಿಮ್ಮದೋ ಅಥವಾ ನಿಮ್ಮ ಪ್ರೀತಿಪಾತ್ರರದ್ದೋ ಆಗಿರಬಹುದು, ದಯಮಾಡಿ ಆಂಬುಲೆನ್ಸ್‌ಗಳಿಗೆ ಜಾಗ ಮಾಡಿ ಕೊಡಿ ಎಂದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!