Wednesday, March 29, 2023

Latest Posts

‘ಚಾಟ್‌ಜಿಪಿಟಿ’ ಬೆಂಬಲಿತ ಪ್ರಿಮಿಯಂ ಟೀಮ್ಸ್‌ ಘೋಷಿಸಿದ ಮೈಕ್ರೋಸಾಫ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಂಪನಿಯಿಂದ ಹೊರಹಾಕಿರುವ ಟೆಕ್‌ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್‌ ಕೃತಕಬುದ್ಧಿ ಮತ್ತೆಯ ಕ್ಷೇತ್ರದಲ್ಲಿ ಅಪಾರ ಹೂಡಿಕೆ ಮಾಡಿದ್ದು ಓಪನ್‌ ಎಐ (OpenAI) ಜೊತೆಗೆ ಸಹಭಾಗಿತ್ವವನ್ನು ಹೊಂದಿದೆ. ತನ್ನ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೃತಕಬುದ್ಧಿಮತ್ತೆ ಆಧಾರದಲ್ಲಿ ಸೇವೆಗಳನ್ನೂ ನೀಡುವುದಾಗಿ ಕಂಪನಿ ಈ ಹಿಂದೆ ಹೇಳಿತ್ತು.

ಇದೀಗ ಮೈಕ್ರೋಸಾಫ್ಟ್‌ ತನ್ನ ಪ್ರಸಿದ್ಧ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಮೈಕ್ರೋಸಾಫ್ಟ್‌ ಟೀಮ್ಸ್‌ (Teams) ನಲ್ಲಿ ಚಾಟ್‌ಜಿಪಿಟಿ ಬೆಂಬಲಿತ ಮೆಸೆಜಿಂಗ್‌ ಸೇವೆಗಳನ್ನು ನೀಡುವುದಾಗಿ ಹೇಳಿದೆ. OpenAI-ಮಾಲೀಕತ್ವದ ChatGPT ಸ್ವಯಂಚಾಲಿತವಾಗಿ ಸಭೆಯ ಟಿಪ್ಪಣಿಗಳನ್ನು ರಚಿಸಲಿದ್ದು, ಕಾರ್ಯಗಳನ್ನು ಶಿಫಾರಸು ಮಾಡುತ್ತದೆ ಮತ್ತು ಟೀಮ್ಸ್ ಬಳಕೆದಾರರಿಗೆ ಮೀಟಿಂಗ್‌ನ ಟೆಂಪ್ಲೇಟ್‌ಗಳನ್ನು ರಚಿಸಲು ಸಹಾಯ ಮಾಡಲಿದೆ.

ಈ ತಿಂಗಳ ಆರಂಭದಲ್ಲಿ OpenAI ನಲ್ಲಿ ಶತಕೋಟಿ ಡಾಲರ್ ಹೂಡಿಕೆಯನ್ನು ಘೋಷಿಸಿದ ಮೈಕ್ರೋಸಾಫ್ಟ್, ತನ್ನ ಎಲ್ಲಾ ಉತ್ಪನ್ನಗಳಲ್ಲಿ ChatGPT ತಂತ್ರಜ್ಞಾನವನ್ನು ಸೇರಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದೆ. ಈ ಹೊಸ ಸೇವೆಯು ಚಂದಾದಾರಿಕೆಯ ಆಧಾರದಲ್ಲಿ ಲಭ್ಯವಾಗಲಿದ್ದು ಆರಂಭಿಕವಾಗಿ 7 ಡಾಲರ್‌ ಗೆ ಲಭ್ಯವಾಗಲಿದೆ.

ʼಚಾಟ್‌ಜಿಪಿಟಿʼ ಯು ಸದ್ಯ ಟೆಕ್‌ ವಲಯದಲ್ಲಿ ಭಾರೀ ಚರ್ಚೆಯಲ್ಲಿದ್ದು ಕೃತಕಬುದ್ಧಿಮತ್ತೆಯ ಮೂಲಕ ಕಾರ್ಯನಿರ್ವಹಿಸುವ ಈ ಯಾಂತ್ರಿಕೃತ ವ್ಯವಸ್ಥೆಯು ಸ್ವತಃ ಕಥೆ, ಕವನ, ಪ್ರಬಂಧರ ಇತ್ಯಾದಿ ಭಾಷಾವಿಷಯಕ್ಕೆ ಸಂಬಂಧಿಸಿದ ವಸ್ತುಗಳನ್ನು ರಚಿಸಿಕೊಡಬಲ್ಲ ಸಾಮರ್ಥ್ಯ ಹೊಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!