Monday, October 2, 2023

Latest Posts

ಬೆಂಗಳೂರಿಗೆ ಎರಡನೇ ಅಧಿಕೃತ ‘ಫುಡ್‌ ಸ್ಟ್ರೀಟ್’ : ಎಲ್ಲಿ, ಯಾವಾಗ ತೆರೆಯಲಿದೆ ? – ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರಿನ ಆಹಾರ ಪ್ರಿಯರಿಗೆ ಸಿಹಿಸುದ್ದಿ ಇಲ್ಲಿದೆ. ನಗರದಲ್ಲಿ ಇನ್ನೊಂದು ಫುಡ್‌ ಸ್ಟ್ರೀಟ್‌ ಆರಂಭಿಸಲು ಬಿಬಿಎಂಪಿ ಸಜ್ಜಾಗಿದೆ.

ನಗರದಲ್ಲಿ ಎರಡನೇ ಅಧಿಕೃತ ‘ಫುಡ್‌ ಸ್ಟ್ರೀಟ್’ ಶುರುವಾಗೋಕೆ ದಿನಗಣನೆ ಆರಂಭವಾಗಿದ್ದು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

ದಕ್ಷಿಣ ಬೆಂಗಳೂರಿನ ವಿವಿ ಪುರಂ ಫುಡ್‌ ಸ್ಟ್ರೀಟ್ ಜನಪ್ರಿಯವಾಗಿರುವ ಕಾರಣ ಉತ್ತರ ಬೆಂಗಳೂರಿನಲ್ಲಿ ಹೊಸದೊಂದು ಪುಡ್‌ ಸ್ಟ್ರೀಟ್‌ ಅನ್ನು ಬಿಬಿಎಂಪಿ ನಿರ್ಮಾಣ ಮಾಡಿದೆ.

ಎರಡನೇ ಅಧಿಕೃತ ಫುಡ್‌ ಸ್ಟ್ರೀಟ್‌ ಯಲಹಂಕ ನ್ಯೂ ಟೌನ್‌ನ ಶೇಷಾದ್ರಿಪುರಂ ಕಾಲೇಜು ಬಳಿ ಸಿದ್ದವಾಗಿದೆ. ದೊಡ್ಡಬಳ್ಳಾಪುರ ರಸ್ತೆ ಮತ್ತು ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ನಡುವಿನ 500 ಮೀಟರ್ ಉದ್ದದ ಜಾಗದಲ್ಲಿ ತಿಂಡಿ ಬೀದಿ ಅನಾವರಣಗೊಳ್ಳಲಿದೆ.

ಇದುವರೆಗೆ ತ್ಯಾಜ್ಯದಿಂದಲೇ ತುಂಬಿರುತ್ತಿದ್ದ ಸ್ಥಳ ಇನ್ಮೇಲೆ ಬೆಂಗಳೂರಿನ ಎರಡನೇ ಅಧಿಕೃತ ಫುಡ್ ಸ್ಟ್ರೀಟ್ ಆಗಿ ಬದಲಾಗಲಿದೆ. ಬೆಂಗಳೂರಿನ ಆಹಾರ ರಸಿಕರು ಅರಸಿ ಬರುವ ಮತ್ತೊಂದು ತಾಣವಾಗಿ ಮಾರ್ಪಾಡಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!