August 24, 2026
Monday, August 24, 2026
spot_img

ಬೆಂಗಳೂರಿಗರೇ, ನಾಳೆ 12 ಗಂಟೆ ಕಾವೇರಿ ನೀರು ಪೂರೈಕೆ ಸ್ಥಗಿತ, ಲಿಸ್ಟ್‌ನಲ್ಲಿ ನಿಮ್ಮ ಏರಿಯಾ ಇದೆಯಾ ನೋಡ್ಕೊಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ನಾಳೆ (ಜುಲೈ 22) ಬೆಂಗಳೂರಿನ ಹಲವು ಪ್ರದೇಶಗಳಲ್ಲಿ 12 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ. ನಾಳೆಯ ದಿನಚರಿಯನ್ನು ಇಂದೇ ಪ್ಲಾನ್‌ ಮಾಡಿ ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು ಎಂದು ಹೇಳಲಾಗಿದೆ.

ಕಾವೇರಿ ನೀರು ಸರಬರಾಜು ಯೋಜನೆ ಹಂತ-4, ಮೊದಲ ಹಂತದ ಅಡಿಯಲ್ಲಿ 1200 ಮಿ.ಮೀ. ವ್ಯಾಸದ ಪೈಪ್‌ಲೈನ್‌ನಲ್ಲಿ ಅಳವಡಿಸಲಾಗಿರುವ 200 ಮಿ.ಮೀ. ಏರ್ ವಾಲ್ವ್ ಹಾಗೂ ಸ್ಲೂಯಿಸ್ ವಾಲ್ವ್‌ಗಳಲ್ಲಿ ಉಂಟಾಗಿರುವ ಸೋರಿಕೆಯನ್ನು ಸರಿಪಡಿಸುವ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ರಾಜಾಜಿನಗರ
ಮಹಾಲಕ್ಷ್ಮಿ ಲೇಔಟ್
ನಂದಿನಿ ಲೇಔಟ್
ಬಸವೇಶ್ವರನಗರ
ವಿಜಯನಗರ
ನಾಗರಭಾವಿ
ಕಾಮಾಕ್ಷಿಪಾಳ್ಯ
ಯಶವಂತಪುರ
ಪೀಣ್ಯ
ದಾಸರಹಳ್ಳಿ
ಜಾಲಹಳ್ಳಿ
ಜೆ.ಪಿ.ನಗರ
ಬಿಟಿಎಂ ಲೇಔಟ್
ಎಚ್‌ಎಸ್‌ಆರ್ ಲೇಔಟ್
ಕೋರಮಂಗಲ
ಬೆಳ್ಳಂದೂರು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !