ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳ ಮೇಲೆ ಐಟಿ ಕಣ್ಣು: ದೇಶದಾದ್ಯಂತ 110 ಕಡೆಗಳಲ್ಲಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಕ್ರಮ ಹಣಕಾಸು ವ್ಯವಹಾರ, ತೆರಿಗೆ ವಂಚನೆ ಮುಂತಾದ ಆರೋಪಗಳ ಆಧಾರದ ಮೇಲೆ ಗುರುತಿಸಲ್ಪಡದ ನೋಂದಾಯಿತ ರಾಜಕೀಯ ಪಕ್ಷಗಳಿಗೆ( RUPP) ಸಂಬಂಧಿಸಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ. ದೇಶದಾದ್ಯಂತ 110ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಚುನಾವಣಾ ಆಯೋಗದಿಂದ ಪಡೆದ ಮಾಹಿತಿಯ ಮೇಲೆ ಐಟಿ ಅಧಿಕಾರಿಗಳು ಸಂಘಟಿತ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಮೂಲಗಳ ವರದಿಯ ಪ್ರಕಾರ ಈ ಪಕ್ಷಗಳ ಮೇಲೆ ಹಣಕಾಸಿನ ಅವ್ಯವಹಾರ, ಉದ್ದೇಶಪೂರ್ವಕ ತೆರಿಗೆ ವಂಚನೆಯ ಪ್ರಯತ್ನಗಳು, ನಕಲಿ ದೇಣಿಗೆಗಳ ಸ್ವೀಕೃತಿ ಮತ್ತು ಕೆಲವು ಘಟಕಗಳಿಂದ ಮನಿ ಲಾಂಡರಿಂಗ್ ಪ್ರದರ್ಶನ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅಗತ್ಯವಿರುವ ಕಾಲಿಕ ಕೊಡುಗೆ ವರದಿಗಳು ಮತ್ತು ವಾರ್ಷಿಕ ಆಡಿಟ್ ವರದಿಗಳನ್ನು ಸಲ್ಲಿಸಲು ವಿಫಲವಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಗುಜರಾತ್, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಹರಿಯಾಣ ಮುಂತಾದ ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ.

ಇಲ್ಲಿಯವರೆಗೆ ಅಸ್ತಿತ್ವದಲ್ಲಿಲ್ಲದ ಒಟ್ಟೂ 111 ಹೆಚ್ಚಿನ RUPP ಗಳನ್ನು ಚುನಾವಣಾ ಆಯೋಗವು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಹಾಗೂ ಚುನಾವಣಾ ಆಯೋಗವು ಕಂದಾಯ ಇಲಾಖೆಗೆ ಪತ್ರ ಬರೆದು ಇಂತಹ ಅಕ್ರಮ ನಡೆಸುತ್ತಿರುವ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ 250 ಹೆಚ್ಚು ಐಟಿ ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ.

ಪ್ರಸ್ತುತ ಮುಂಬೈ ಮೂಲದ ಮಾನ್ಯತೆ ಪಡೆಯದ ಎರಡು ಪಕ್ಷಗಳ ಮೇಲೆ ದಾಳಿ ನಡೆಸಲಾಗಿದ್ದು ಈ ಎರಡು ಪಕ್ಷಗಳು ಕಳೆದ ಎರಡು ವರ್ಷಗಳಲ್ಲಿ 150 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದವು, ತಮ್ಮ ಸಹಚರರಿಗೆ (ಹವಾಲಾ ಆಪರೇಟರ್‌ಗಳು) ತೆರಿಗೆ ವಂಚಿಸಲು ಸಹಾಯ ಮಾಡಿ ನಂತರ ಹಣವನ್ನು ನಗದು ರೂಪದಲ್ಲಿ ಹಿಂದಿರುಗಿಸಿದ್ದರು. ಎರಡು ಪಕ್ಷಗಳ ಅಧ್ಯಕ್ಷರು ತಮ್ಮ ಪಕ್ಷಗಳ ಮೂಲಕ ತಿರುಗುವ ಒಟ್ಟು ಮೊತ್ತದ 0.01% ಅನ್ನು ಕಮಿಷನ್‌ ರೂಪದಲ್ಲಿ ಪಡೆದಿದ್ದರು ಎನ್ನಲಾಗಿದೆ.

ಮುಂಬೈ ಮೂಲದ ಎರಡು ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಅಧ್ಯಕ್ಷರ ಹೇಳಿಕೆಯನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದು ಈ ರಾಜಕೀಯ ಪಕ್ಷಗಳು ಹವಾಲಾಗೆ ಸಹಾಯ ಮಾಡಿವೆ ಎಂದು ಐ-ಟಿ ಅಧಿಕಾರಿಗಳು ಶಂಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!