ಬೆಸ್ಕಾಂ ಗ್ರಾಹಕರೇ ಗಮನಿಸಿ, ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟಲಿಲ್ಲ ಎಂದರೆ ಲೈಸೆನ್ಸ್ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡುವವರಿಗೆ ವಿದ್ಯುತ್ ಸಂಪರ್ಕದ ಲೈಸೆನ್ಸ್ ರದ್ದು ಮಾಡಲು ಬೆಸ್ಕಾಂ ಮುಂದಾಗಿದೆ. ಎರಡು ಅಥವಾ ಮೂರು ತಿಂಗಳಿಗೊಮ್ಮೆ ಕರೆಂಟ್ ಬಿಲ್ ಕಟ್ಟಿದರೂ ನಡೆಯುತ್ತದೆ. ಅಕಸ್ಮಾತ್ ಆಗಲೂ ಆಗಲಿಲ್ಲ ಎಂದರೆ ಫ್ಯೂಸ್ ಕಿತ್ತುಕೊಂಡು ಹೋಗುತ್ತಾರಷ್ಟೆ ಎನ್ನುವವರಿಗೆ ದೊಡ್ಡ ಶಾಕ್ ಎದುರಾಗಿದ್ದು, ಇನ್ಮುಂದೆ ಈ ರೀತಿ ಮಾಡಲು ಅವಕಾಶ ಇಲ್ಲ.

ಫ್ಯೂಸ್ ಬದಲಾಗಿ ವಿದ್ಯುತ್ ಸಂಪರ್ಕದ ಲೈಸೆನ್ಸ್ ರದ್ದಾಗುತ್ತದೆ. ಈ ರೀತಿ ಆದರೆ ಮತ್ತೆ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ತೆಗೆದುಕೊಳ್ಳಬೇಕಿದೆ. ವಿದ್ಯುತ್ ಬಿಲ್ ಪಾವತಿಗೆ ವಿಳಂಬ ಮಾಡಿದಷ್ಟು ಸಮಸ್ಯೆ ಹೆಚ್ಚಾಗಲಿದೆ.

ಹೊರ ದೇಶಕ್ಕೆ ಪ್ರಯಾಣಿಸುವವರು ಹಾಗೂ ಮೂರು ತಿಂಗಳಿಗೊಮ್ಮೆ ಬಿಲ್ ಪಾವತಿಸುವವರಿಗೆ ಆತಂಕ ಎದುರಾಗಿದೆ. ಆನ್‌ಲೈನ್‌ನಲ್ಲಿಯೂ ಬಿಲ್ ಕಟ್ಟುವ ಸೌಲಭ್ಯ ಇದ್ದರೂ ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡುವುದಿಲ್ಲ ಎಂದು ಬೆಸ್ಕಾಂ ಹೇಳಿದೆ.

ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೂತನ ಪ್ರಯೋಗಕ್ಕೆ ಬೆಸ್ಕಾಂ ಮುಂದಾಗಿದ್ದು, ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡಿ ನಿಮ್ಮ ಕನೆಕ್ಷನ್ ಉಳಿಸಿಕೊಳ್ಳಿ ಎಂದು ಬೆಸ್ಕಾ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!