Saturday, September 23, 2023

Latest Posts

ಬಿಎಂಟಿಸಿ ಡಿಪೋಗಳಿಗೂ ಬಂತು ಸೋಲಾರ್‌: ವಿದ್ಯುತ್‌ ಶುಲ್ಕ ತಗ್ಗಿಸುವ ನಿರೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಡಿಪೋಗಳ ಛಾವಣಿಗೆ ಸೌರ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಿದೆ. ಈ ಮೂಲಕ ವಿದ್ಯುತ್‌ ಶುಲ್ಕದಲ್ಲಿ ಲಕ್ಷಾಂತರ ರೂ. ಉಳಿತಾಯ ಮಾಡಲಿರುವ ಸಂಸ್ಥ, ತನ್ನ ಆರ್ಥಿಕ ದಿವಾಳಿತನದಿಂದ ಚೇತರಿಸಿಕೊಳ್ಳಲಿದೆ.
ಕೇಂದ್ರ ಸರ್ಕಾರದ 13ನೇ ಹಣಕಾಸು ಆಯೋಗದ ಅನುದಾನದಲ್ಲಿ ಬೆಸ್ಕಾಂ 22 ಬಸ್‌ ಡಿಪೋ ಹಾಗೂ 3 ಕೇಂದ್ರೀಯ ಕಾರ್ಯಗಾರಗಳ ಛಾವಣಿಯಲ್ಲಿ ಸೌರ ವಿದ್ಯುತ್‌ ಉತ್ಪಾದನಾ ಘಟಕ ನಿರ್ಮಾಣ ಮಾಡುತ್ತಿದೆ. ಈಗಾಗಲೇ 13 ಡಿಪೋಗಳಲ್ಲಿ ಸೌರ ವಿದ್ಯುತ್‌ ಅಳವಡಿಸಿದ್ದು, ಉಳಿದ ಡಿಪೋಗಳ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಇದರಿಂದ ದಿನಕ್ಕೆ 40-50 ಕಿ.ವ್ಯಾಟ್‌ ನಷ್ಟು ವಿದ್ಯುತ್‌ ಉದ್ಪಾದನಾ ಸಾಮರ್ಥ್ಯ ಹೊಂದಿದೆ. 22 ಡಿಪೋ ಹಾಗೂ 3 ಕೇಂದ್ರೀಯ ಕಾರ್ಯಾಗಾರಗಳಲ್ಲಿ 1642 ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಇದೆ.
ಈಗಾಗಲೇ 17 ಡಿಪೊಗಳಲ್ಲಿ ಇಲ್ಲಿಯವರೆಗೆ 42,844 ಯೂನಿಟ್‌ ನಷ್ಟು ಸೌರ ವಿದ್ಯುತ್‌ ಉತ್ಪಾದನೆಯಾಗಿದ್ದು, ಸಾರಿಗೆ ಸಂಸ್ಥೆಗೆ 3,36,188 ರೂ. ವಿದ್ಯುತ್‌ ಶುಲ್ಕ ಉಳಿದಿದೆ. ಮುಂದಿನ ದಿನಗಳಲ್ಲಿ ಈ ವಿದ್ಯುತ್‌ ಶುಲ್ಕದ ಮೊತ್ತವನ್ನು ಹೆಚ್ಚಾಗಿ ಉಳಿಸುವಂತೆ ಸಂಸ್ಥೆ ನಿರ್ಧರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!