Saturday, September 23, 2023

Latest Posts

ಗುಡ್ಡ ಕುಸಿತ: ನಾಲ್ವರು ಯುವತಿಯರು ಜೀವಂತ ಸಮಾಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರ್ಯಾಣದಲ್ಲಿ ಮಣ್ಣಿನ ಗುಡ್ಡ ಕುಸಿದು ನಾಲ್ವರು ಯುವತಿಯರು ಮೃತಪಟ್ಟಿದ್ದಾರೆ.
ನುಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮನೆಯ ಕೆಲಸಕ್ಕೆ ಮಣ್ಣು ಬೇಕೆಂದು ಮಣ್ಣು ತರು ಐವರು ಯುವತಿಯರು ತೆರಳಿದ್ದು, ಈ ವೇಳೆ ಗುಡ್ಡ ಕುಸಿದಿದೆ. ನಾಲ್ವರು ಜೀವಂತ ಸಮಾಧಿಯಾಗಿದ್ದು, ಇನ್ನೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ವಕೀಲಾ, ತಸ್ಲೀಮಾ,ಜನಿಸ್ಟಾ,ಗುಲಫ್ಮಾ ಮೃತರು. ಸೋಫಿಯಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ಕೆಲಸಕ್ಕೆಂದು ಮಣ್ಣು ಅವಶ್ಯವಿದ್ದು, ಯುವತಿಯರೆಲ್ಲ ಒಟ್ಟಾಗಿ ಮಣ್ಣು ತರಲು ಹೋಗಿದ್ದರು. ಈ ವೇಳೆ ಮಣ್ಣಿನ ಗುಡ್ಡದ ಒಂದು ಬದಿ ಕುಸಿದು ಮೈ ಮೇಲೆ ಬಿದ್ದಿದೆ. ಸೋಫಿಯಾ ತಪ್ಪಿಸಿಕೊಂಡಿದ್ದು, ಗಾಯಗೊಂಡಿದ್ದಾಳೆ. ಆಕೆ ಮನೆಗೆ ತೆರಳಿ ವಿಷಯ ತಿಳಿಸಿದ್ದು, ಸ್ಥಳೀಯರು ಯುವತಿಯರನ್ನು ಮಣ್ಣಿನಿಂದ ಹೊರಗೆಳೆದಿದ್ದಾರೆ. ಆದರೆ ಆ ವೇಳೆ ಉಸಿರು ನಿಂತಿತ್ತು. ಇದೊಂದು ಅಪಘಾತ ಎಂದು ಪೊಲೀಸರು ಪರಿಗಣಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!