ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಸರಿ ಬಣ್ಣದ ಬಿಕಿನಿ ತೊಟ್ಟಿರುವ ದೀಪಿಕಾ ಪಡುಕೋಣ್ ವಿರುದ್ಧ ಭಾರೀ ಆಕ್ರೋಶ ಎದುರಾಗಿದೆ. ಇದರ ಬೆನ್ನಲ್ಲೇ ಕಂಗನಾ ಫೋಟೊ ಒಂದು ವೈರಲ್ ಆಗಿದ್ದು, ಅವರ ವಿರುದ್ಧವೂ ಒಂದು ವರ್ಗದ ಜನರು ಗರಂ ಆಗಿದ್ದಾರೆ.
ರಿಯಾಲಿಟಿ ಶೋ ಲಾಕ್ಅಪ್ನಲ್ಲಿ ಕಂಗನಾ ಬೂಟುಗಾಲಿನಲ್ಲಿ ಕೇಸರಿ ಕೋಟ್ ತೊಟ್ಟಿರುವ ವ್ಯಕ್ತಿ ಹೆಗಲ ಮೇಲೆ ಕಾಲಿಟ್ಟಿದ್ದಾರೆ. ಕೇಸರಿ ಬಣ್ಣದ ಮೇಲೆ ಕಾಲಿಟ್ಟು ಅವಮಾನ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ದೂರಿದ್ದು, ಸಿನಿಮಾದಿಂದ ಕಂಗನಾರನ್ನು ಬ್ಯಾನ್ ಮಾಡಿ ಎನ್ನುತ್ತಿದ್ದಾರೆ.