CINE NEWS |’ಬೇಷರಮ್ ರಂಗ್’ ಕೇಸರಿ ಬಿಕಿನಿ ವಿವಾದ: ಬಾಯ್‌ಕಾಟ್ ಪಠಾಣ್ ಅಂತಿದ್ದಾರೆ ನೆಟ್ಟಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರುಖ್ ಖಾನ್ ಅಭಿನಯದ ಪಠಣ್ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ. ಇತ್ತೀಚೆಗಷ್ಟೇ ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡು ರಿಲೀಸ್ ಆಗಿದ್ದು, ಬರೋಬ್ಬರಿ ಮೂರು ಕೋಟಿ ವೀಕ್ಷಣೆ ಕಂಡಿದೆ.

ಆದರೆ ಇದೀಗ ಟ್ವಿಟರ್‌ನಲ್ಲಿ ಬಾಯ್‌ಕಾಟ್ ಪಠಾಣ್ ಟ್ರೆಂಡ್ ಆರಂಭವಾಗಿದೆ. ಇದಕ್ಕೆ ಕಾರಣ ಇಷ್ಟೆ..
ಪಠಾಣ್ ಸಿನಿಮಾದ ಈ ಹಾಡಿನಲ್ಲಿ ದೀಪಿಕಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿದ್ದಾರೆ. ಒಂದು ವರ್ಗದ ಪ್ರೇಕ್ಷಕರಿಗೆ ಇದು ಅಶ್ಲೀಲವಾಗಿ ಕಾಣಿಸಿದೆ. ಇಷ್ಟೊಂದು ಅಶ್ಲೀಲವಾದ ಬಟ್ಟೆಗಳನ್ನು ಹಾಕುವ ಅಗತ್ಯ ಇರಲಿಲ್ಲ.

pathaan song besharam rang heavily trolled on social media people disliked  deepika padukone raunchy moves - पठान के गाने 'बेशर्म रंग' को लोगों ने  बताया वल्गर, बोले- दीपिका ने कैसे कर लिएಸಿಕ್ಕಾಪಟ್ಟೆ ಎಕ್ಸ್ಪೋಸಿಂಗ್ ಆಗಿದೆ ಎನ್ನುತ್ತಿದ್ದಾರೆ. ಇನ್ನು ಬಿಕಿನಿ ಬಣ್ಣ ಕೇಸರಿ ಆಗಿದ್ದಕ್ಕೆ ಇನ್ನಷ್ಟು ಮಂದಿಗೆ ಕೋಪ ಬಂದಿದೆ. ಕೇಸರಿ ಎಂದರೆ ಪರಿತ್ಯಾಗ, ತ್ಯಾಗ, ಜ್ಞಾನ, ಶುದ್ಧತೆ ಹಾಗೂ ಸೇವೆ ಎನ್ನುವ ಅರ್ಥ ಬರುತ್ತದೆ. ಆದರೆ ಈ ಬಣ್ಣದ ಬಟ್ಟೆ ಧರಿಸಿ ಬೇಷರಮ್ ರಂಗ್( ನಾಚಿಕೆಯಿಲ್ಲದ ಬಣ್ಣ) ಎಂಬರ್ಥದ ಹಾಡು ಇರುವುದು ಸರಿಯಲ್ಲ ಎನ್ನುವುದು ಕೆಲವರ ವಾದವಾಗಿದೆ.

Pathaan Song Besharam Rang: Shah Rukh Khan Smitten By Deepika Padukone. Who  Can Blame Him?ಶಾರುಖ್ ಖಾನ್ ಸಿನಿಮಾಗಳನ್ನು ಒಂದು ವರ್ಗದ ಪ್ರೇಕ್ಷಕರು ಸದಾ ವಿರೋಧಿಸಿದ್ದಾರೆ. ಬಾಯ್‌ಕಾಟ್ ಪಠಾಣ್ ವಿವಾದ ಹೆಚ್ಚಾದರೆ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಹೊಡೆತ ಬೀಳುವುದಂತೂ ಗ್ಯಾರೆಂಟಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!