Thursday, February 2, 2023

Latest Posts

ಪತ್ನಿಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ವ್ಯಕ್ತಿ: ರಾಧಾಳಿಗಾಗಿ ಕೃಷ್ಣನಾದ ಅಫ್ಸರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಐದು ವರ್ಷಗಳ ಹಿಂದೆ ದೇವಸ್ಥಾನವೊಂದರಲ್ಲಿ ಹಿಂದೂ ಯುವತಿಯನ್ನು ಮದುವೆಯಾಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಇದೀಗ ಪತ್ನಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ.
ವೃತ್ತಿಯಲ್ಲಿ ಚಾಲಕನಾಗಿರುವ ಮಂದಸೌರ್‌ನ ಕಚನಾರಾ ಗ್ರಾಮದ ನಿವಾಸಿ ಅಫ್ಸರ್ ಮನ್ಸೂರಿ ತನ್ನ ಹೆಸರನ್ನು ‘ಕೃಷ್ಣ ಸನಾತನಿ’ ಎಂದು ಬದಲಾಯಿಸಿಕೊಂಡಿದ್ದಾರೆ.
ಮನ್ಸೂರಿ, ರಾಧಾಳನ್ನು ಮದುವೆಯಾದ ನಂತರ ತನ್ನ ಕುಟುಂಬದೊಂದಿಗೆ ವಾಸಿಸುವುದನ್ನು ನಿಲ್ಲಿಸಿದನು. ಮಂಗಳವಾರದಂದು ಉಪವಾಸವನ್ನು ಆಚರಿಸುವುದು ಸೇರಿದಂತೆ ಹೆಚ್ಚಿನ ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದ ಅವರು ಅಂತಿಮವಾಗಿ ಸಂಪೂರ್ಣವಾಗಿ ಹಿಂದೂವಾಗಲು ನಿರ್ಧರಿಸಿದರು.
‘ಗಾಯತ್ರಿ ಪರಿವಾರ’ದ ಪಂಡಿತ್ ನರೇಶ್ ತ್ರಿವೇದಿ ಅವರು ಮನ್ಸೂರಿಗೆ ಹಸುವಿನ ಸಗಣಿ, ಗೋಮೂತ್ರ, ಮೊಸರು, ಹಾಲು ಮತ್ತು ಜೇನುತುಪ್ಪದಿಂದ ಶುದ್ಧೀಕರಿಸಿ, ಮಂತ್ರಗಳನ್ನು ಪಠಿಸಿ ಸನಾತನ ಧರ್ಮಕ್ಕೆ ಸೇರ್ಪಡೆಗೊಳಿಸುವ ಆಚರಣೆಗಳನ್ನು ನಡೆಸಿದರು.
ಕೃಷ್ಣ ಸನಾತನಿ ತಾವು ರಾಜಸ್ಥಾನದ ಉದಯಪುರದಲ್ಲಿ ರೋಗಿಗಳನ್ನು ವೈದ್ಯಕೀಯ ಶಿಬಿರಗಳಿಗೆ ಸಾಗಿಸುತ್ತಿದ್ದಾಗ ರಾಧಾಳನ್ನು ಭೇಟಿಯಾಗಿದ್ದಾಗಿ ಹೇಳಿದರು. ರಾಧಾ ಅಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದರು. ಕ್ರಮೇಣ ಅವರಿಬ್ಬರ ನಡುವೆ ಪ್ರೀತಿ ಮೂಡಿ ಮದುವೆಯಾಗಲು ನಿರ್ಧರಿಸಿದ್ದರು.
“ಸಾಮಾನ್ಯವಾಗಿ ಪ್ರೀತಿಯಲ್ಲಿ ಬಿದ್ದ ಜನರು ಎಂತಹ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ನನ್ನ ಪತಿ ಪ್ರೀತಿಗಾಗಿ ಹಿಂದೂ ಆಗಿದ್ದಾರೆ.” ಇದು ನಿಜಕ್ಕೂ ನನಗೆ ಸಂತೋಷದ ವಿಚಾರ” ಎಂದು ಕೃಷ್ಣ ಪತ್ನಿ ರಾಧ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!