ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 24 ರಂದು ಶಾರುಖ್ ಹಾಗೂ ದೀಪಿಕಾ ಅಭಿನಯದ ಪಠಾಣ್ ಸಿನಿಮಾ ತೆರೆಕಾಣಲಿದೆ.
ರಿಲೀಸ್ಗೂ ಮುನ್ನವೇ ಸಿನಿಮಾದ ಹಾಡೊಂದು ಸಾಕಷ್ಟು ವಿವಾದ ಸೃಷ್ಟಿಸಿದ್ದು, ಸೆನ್ಸಾರ್ ಮಂಡಳಿ ಬೇಷರಮ್ ರಂಗ್ ಹಾಡಿಗೆ ಕತ್ತರಿ ಹಾಕಬಹುದು ಎಂದು ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.
ಸಿನಿಮಾದಿಂದ ಹಾಡನ್ನು ತೆಗೆದುಹಾಕುವ ಆಯ್ಕೆಯನ್ನು ಮಂಡಳಿ ಹೊಂದಿದೆ ಎಂದು ಹೇಳಿದ್ದಾರೆ.
ಕೇಸರಿ ಬಣ್ಣದ ಬಿಕಿನಿ ತೊಟ್ಟು ಅಶ್ಲೀಲವಾದ ನೃತ್ಯ ಮಾಡಲಾಗಿದೆ, ಹಸಿರು ಶರ್ಟ್ ತೊಟ್ಟಿರುವ ಹೀರೋ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ ಕೇಸರಿ ಬಣ್ಣವನ್ನು ಬೇಷರಮ್ ರಂಗ್ ಎಂದು ಹೇಳುವಂತಿಲ್ಲ ಎಂದು ವಿವಾದ ಎದ್ದಿದೆ.