August 12, 2026
Wednesday, August 12, 2026
spot_img

ಆರೋಗ್ಯಕರ ರಾತ್ರಿ ಊಟಕ್ಕೆ ಬೆಸ್ಟ್‌ ಆಯ್ಕೆ: ಸೂಪರ್ ಟೇಸ್ಟಿ ಹೈ-ಪ್ರೋಟೀನ್ ಸಲಾಡ್ ಮಾಡುವ ಸರಳ ವಿಧಾನ ಇಲ್ಲಿದೆ

ರಾತ್ರಿಯ ಸಮಯದಲ್ಲಿ ಹಗುರವಾದ ಹಾಗೂ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮತ್ತು ಜಿಮ್‌ಗೆ ಹೋಗುವವರಿಗೆ ಪ್ರೋಟೀನ್ ಅತ್ಯಗತ್ಯ. ಮನೆಯಲ್ಲೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಕೇವಲ 10 ನಿಮಿಷಗಳಲ್ಲಿ ರುಚಿಕರವಾದ ಹೈ-ಪ್ರೋಟೀನ್ ಸಲಾಡ್ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

ಮೊಳಕೆ ಬರಿಸಿದ ಹೆಸರುಕಾಳು

ಬೇಯಿಸಿದ ಕಡಲೆಕಾಯಿ

ಪನೀರ್

ಈರುಳ್ಳಿ ಮತ್ತು ಟೊಮೆಟೊ

ಸೌತೆಕಾಯಿ

ಹಸಿಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

ಲೆಮನ್ ಜ್ಯೂಸ್

ಚಾಟ್ ಮಸಾಲಾ

ಕಾಳುಮೆಣಸಿನ ಪುಡಿ

ಉಪ್ಪು

ಮಾಡುವ ವಿಧಾನ

ಒಂದು ದೊಡ್ಡ ಬೌಲ್ ತೆಗೆದುಕೊಂಡು. ಅದಕ್ಕೆ ಮೊಳಕೆ ಬರಿಸಿದ ಹೆಸರುಕಾಳು, ಬೇಯಿಸಿದ ಕಡಲೆ ಮತ್ತು ಪನೀರ್ ತುಂಡುಗಳನ್ನು ಹಾಕಿ. ಅದೇ ಬೌಲ್‌ಗೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಸೌತೆಕಾಯಿ ಮತ್ತು ಹಸಿಮೆಣಸಿನಕಾಯಿಯನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ. ಸಲಾಡ್‌ಗೆ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ. ಕೊನೆಯದಾಗಿ ನಿಂಬೆ ರಸವನ್ನು ಹಿಂಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಚೆನ್ನಾಗಿ ಟಾಸ್ ಮಾಡಿದರೆ, ಆಕರ್ಷಕ ಹಾಗೂ ಅತ್ಯಂತ ಆರೋಗ್ಯಕರವಾದ ಹೈ-ಪ್ರೋಟೀನ್ ಸಲಾಡ್ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !