ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಣ್ಣ ಸಲಹೆಗಳೊಂದಿಗೆ, ಮನೆಯಲ್ಲಿ ಲಭ್ಯವಿರುವ ವಸ್ತುಗಳೊಂದಿಗೆ ನಿಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿ ಇರಿಸಬಹುದು.ಸರಳ ವಿಧಾನಗಳಲ್ಲಿ ಆರೋಗ್ಯಕರ ಸಲಹೆಗಳನ್ನು ಅನುಸರಿಸುವುದು ಕಷ್ಟವೇನಲ್ಲ. ಸ್ವಲ್ಪ ತಾಳ್ಮೆ ಮುಖ್ಯ. ಮಹಿಳೆಯರಿಗೆ ಮುಖ್ಯವಾಗಿ ಕೂದಲು ಹಾಗೂ ತ್ವಚೆಯ ಮೇಲೆ ಎಲ್ಲಿಲ್ಲದ ವ್ಯಾಮೋಹ. ಎಷ್ಟೇ ಮುಂಜಾಗ್ರತೆ ವಹಿಸಿದರೂ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಅದೆಲ್ಲವನ್ನು ದೂರವಿಡಲು ವೀಳ್ಯೆದೆಲೆಯನ್ನು ಉಪಯೋಗಿಸಿ ನೋಡಿ..
ಪೂಜೆ, ಶುಭ ಕಾರ್ಯ, ವೈದ್ಯಕೀಯ ಚಿಕಿತ್ಸೆಯಲ್ಲಿ ವೀಳ್ಯದೆಲೆಯ ಬಳಕೆಯು ಪ್ರಾಚೀನ ಕಾಲದಿಂದಲೂ ಇದೆ. ಆಯುರ್ವೇದ ಔಷಧದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ವೀಳ್ಯದೆಲೆಯಲ್ಲಿ ಪೊಟಾಶಿಯಂ, ನಿಕೋಟಿನಿಕ್ ಆಮ್ಲ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ2, ವಿಟಮಿನ್ ಬಿ1 ಮುಂತಾದ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿನ ಆರೈಕೆಗೂ ನೆರವಾಗುತ್ತವೆ.
- ವೀಳ್ಯದೆಲೆಯಲ್ಲಿರುವ ಪೋಷಕಾಂಶಗಳು ಕೂದಲು ಉದುರುವಿಕೆ ಮತ್ತು ತೆಳುವಾಗುವಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
- ವೀಳ್ಯದೆಲೆಯಲ್ಲಿ ಹೇರಳವಾದ ತೇವಾಂಶವು ಕೂದಲನ್ನು ಶುಷ್ಕತೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
- ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ನೆತ್ತಿಯನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ.
- ತಲೆಹೊಟ್ಟು ಸಮಸ್ಯೆಯನ್ನು ನಿಯಂತ್ರಿಸುವ ಮೂಲಕ ಹೇರ್ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ.
ವೀಳ್ಯದೆಲೆ ಪೇಸ್ಟ್ ಹೀಗೆ ತಯಾರಿಸಿ..
ಇಪ್ಪತ್ತು ವೀಳ್ಯದೆಲೆಗಳನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆದು ಪೇಸ್ಟ್ ಮಾಡಿಕೊಳ್ಳಿ. ಪೇಸ್ಟ್ ಗೆ ಒಂದು ಚಮಚ ತುಪ್ಪ ಸೇರಿಸಿ ಮಿಕ್ಸ್ ಮಾಡಿ. ಈ ರೀತಿ ಮಾಡಿದ ಪೇಸ್ಟ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಬೇಕು. ಒಂದು ಗಂಟೆ ಹೀಗೆ ಬಿಡಿ. ನಂತರ ನೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ವೀಳ್ಯದೆಲೆಯಲ್ಲಿರುವ ಪೋಷಕಾಂಶಗಳು ಕೂದಲಿಗೆ ತಲುಪುತ್ತದೆ. ಕೂದಲು ಬಲಗೊಳ್ಳುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ವೀಳ್ಯದೆಲೆಯ ಪೇಸ್ಟ್ ಅನ್ನು ಸ್ವಲ್ಪ ತೆಂಗಿನೆಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ನೊಂದಿಗೆ ಬೆರೆಸಿ ಕೂದಲಿನ ಬುಡಕ್ಕೆ ಮಸಾಜ್ ಮಾಡಿದರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಕೂದಲು ದಟ್ಟವಾಗಿ ಮತ್ತು ಬಲವಾಗಿ ಬೆಳೆಯುತ್ತದೆ. ವಾರಕ್ಕೊಮ್ಮೆ ಹೀಗೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.