ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನಲ್ಲಿ ಸದ್ದಿಲ್ಲದೇ ಮತ್ತೊಂದು ಮದುವೆಗೆ ತಯಾರಿ ಆಗುತ್ತಿದೆ.
ಖ್ಯಾತ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಡಿಸೆಂಬರ್‌ನಲ್ಲಿ ಹಸೆಮಣೆ ಏರಲಿದ್ದಾರೆ.
ಸಂದರ್ಶನವೊಂದರಲ್ಲಿ ಈ ವಿಷಯ ಹೊರಬಂದಿದ್ದು, ನಟಿ ತಾರಾ ಮದುವೆ ವಿಷಯವನ್ನು ರಿವೀಲ್ ಮಾಡಿದ್ದಾರೆ.
ಆಂಕರ್ ಅನುಶ್ರೀ ನಿಮ್ಮನ್ನು ವರಿಸುವ ಹುಡುಗಿ ಹೇಗಿರಬೇಕು ಎಂದು ವಾಸುಕಿ ವೈಭವ್‌ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಟಿ ತಾರಾ ಮುಂದಿನ ತಿಂಗಳು ಇವನಿಗೆ ಮದುವೆ ಎಂದು ಹೇಳಿದ್ದಾರೆ.
ತಕ್ಷಣ ವಾಸುಕಿ ತಾರಾ ಅವರನ್ನು ಮಾತು ನಿಲ್ಲಿಸುವಂತೆ ಸನ್ನೆ ಮಾಡುತ್ತಾರೆ, ಆಗ ತಾರಾ ಅವರು ಅಯ್ಯೋ ಹೇಳಬಾರದಿತ್ತಾ, ಎಡಿಟ್ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಾಸುಕಿ ಹುಡುಗಿ ಯಾರು ಎನ್ನುವ ಕುತೂಹಲ ಮೂಡಿದೆ. ಬಹುಕಾಲದ ಗೆಳತಿಯೊಂದಿಗೆ ವಾಸುಕಿ ನಿಶ್ಚಿತಾರ್ಥ ಆಗಿದೆ, ಮುಂದಿನ ತಿಂಗಳು ಮದುವೆ ಎಂದೂ ಹೇಳಲಾಗಿದೆ.