ವಿಶ್ವಕಪ್​ ಬಳಿಕ ​ಟಿ20ಗೆ ಕೊಹ್ಲಿ ವಿದಾಯ ಹೇಳುವುದು ಉತ್ತಮ: ಶೋಯೆಬ್​ ಅಖ್ತರ್ ಸಲಹೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಿ20 ವಿಶ್ವಕಪ್​ ಕ್ರಿಕೆಟ್​ ಬಳಿಕ ವಿರಾಟ್​ ಕೊಹ್ಲಿ ಚುಟುಕು ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ಳಲಿ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್​ ಅಖ್ತರ್ ಸಲಹೆ ನೀಡಿದ್ದಾರೆ. ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳುವುದು ಸೂಕ್ತ. ಒಂದು ವೇಳೆ ನಾನು ಅವರ ಸ್ಥಾನದಲ್ಲಿದ್ದಿದ್ದರೆ ಖಂಡಿತವಾಗಿಯೂ ಅಂತಹ ನಿರ್ಧಾರ ಕೈಗೊಳ್ಳುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ನಡೆದ ಏಷ್ಯಾ ಕಪ್​​ ಕ್ರಿಕೆಟ್‌ ಟೂರ್ನಿಯಲ್ಲಿ ವಿರಾಟ್​​ ಕೊಹ್ಲಿ ಮತ್ತೆ ಫಾರ್ಮ್​ ಕಂಡುಕೊಂಡಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ರನ್​​​ಗಳಿಸಿರುವ ಎರಡನೇ ಪ್ಲೇಯರ್​ ಆಗಿಯೂ ಕೊಹ್ಲಿ ಹೊರ ಹೊಮ್ಮಿದ್ದರು. ಇದೀಗ ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚು ಕಾಲ ಆಡಬೇಕಾದರೆ ಅವರು ಇಂತಹ ನಿರ್ಧಾರ ಕೈಗೊಳ್ಳುವುದು ಅತಿ ಅವಶ್ಯ ಎನ್ನುವುದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಅಕ್ಟೋಬರ್​​ 16 ರಿಂದ ಟಿ20 ವಿಶ್ವಕಪ್​ ಟೂರ್ನಮೆಂಟ್ ಕಾಂಗರೂ ನೆಲದಲ್ಲಿ ಅರಂಭಗೊಳ್ಳಲಿದೆ. ನವೆಂಬರ್​​ 13ರಂದು ಫೈನಲ್ ಪಂದ್ಯ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!