INSPIRING | ಸಾವು-ಬದುಕಿನ ಹೋರಾಟದ ನಡುವೆ ಶೇ. 87.6 ಅಂಕ ಪಡೆದ ಮಂಡ್ಯದ ದೈವಿಕ್‌

ದಿಗಂತ ವರದಿ ಮಂಡ್ಯ :

ಸೇಂಟ್ ಜಾನ್ಸ್‌ ಕಾಂಪೋಸಿಟ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ದೈವಿಕ್ ವಿಕಲಾಂಗನಾಗಿದ್ದು, ಡಿಶೂನ್ ಮಸ್ಕ್ಯುಲರ್ ಡಿಸ್ಟ್ರೋಫಿ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಕಳೆದ ಜನವರಿ-ಫೆಬ್ರವರಿಯಲ್ಲಿ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ ಸಾವು-ಬದುಕಿನೊಂದಿಗೆ ಹೋರಾಡಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಪರೀಕ್ಷೆ ಬರೆದಿದ್ದಾರೆ.

ಈ ಭೂಮಿ ಮೇಲೆ ತಾನು ಕೆಲವೇ ಕೆಲವು ದಿನಗಳ ಅತಿಥಿ ಎಂಬ ಅರಿವಿದ್ದರೂ ಪರೀಕ್ಷೆ ಬರೆಯಬೇಕೆಂಬ ಹಠ-ಛಲದೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಶೇ. 87.6ರಷ್ಟು ಫಲಿತಾಂಶ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ದೈವಿಕ್‌ನಂಥ ವಿದ್ಯಾರ್ಥಿ ಇಂದಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಮಾದರಿಯಾಗಿರುತ್ತಾನೆ. ಇನ್ನೂ ಹೆಚ್ಚಿನ ಅಂಕ ಪಡೆದು ಕಾಲೇಜು ಹಾಗೂ ಜಿಲ್ಲೆಗೆ ಹೆಮ್ಮೆ ತರಬೇಕೆದುಕೊಂಡಿದ್ದೆ. ಆದರೆ, ನನ್ನ ದೈಹಿಕ ಅಸಮರ್ಥತತೆಯಿಂದಾಗಿ ಸಾಧ್ಯವಾಗಲಿಲ್ಲ ಎಂದು ದೈವಿಕ್ ನೋವಿನಿಂದ ಹೇಳುತ್ತಾನೆ. ಈತನ ಸಾಧನೆ ಇತರರಿಗೆ ಮಾದರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!