ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಗಳಲ್ಲಿನ ಕೊರೋನಾ ಆತಂಕ ಮತ್ತೆ ದೇಶದಲ್ಲಿ ಕಾಡುತ್ತಿದ್ದು, ಡಿಸೆಂಬರ್ ತಿಂಗಳ 24ರವರೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಟ್ಟು 2,867ಪ್ರಯಾಣಿಕರು ಆಗಮಿಸಿದ್ದಾರೆ. ಈ ಪೈಕಿ, ದುಬೈ, ಥೈಲ್ಯಾಂಡ್, ಲಂಡನ್, ಸಿಡ್ನಿ, ಮಾಲ್ಡೀವ್ಸ್ ಸೇರಿ ಬರೋಬ್ಬರು 12 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿಲ್ಲೂ ಬಿಎಫ್-7 ವೈರಸ್ ಭೀತಿ ಶುರುವಾಗಿದ್ದು, ವಿದೇಶಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಯಾಣಿಕರಿಗೆ ಪ್ರತ್ಯೇಕ ಆಸ್ಪತ್ರೆ ಮೀಸಲಿಗೆ ನಿರ್ಧಾರ ಮಾಡಲಾಗಿದೆ. ಇನ್ನು ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಕೊರೋನಾ ದೃಢಪಟ್ಟರೆ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬೌರಿಂಗ್ ಆಸ್ಪತ್ರೆಯಲ್ಲಿ ಒಟ್ಟು 60 ಹಾಸಿಗೆಗಳ ವಾರ್ಡ್ ಸಿದ್ಧಪಡಿಸಲಾಗಿದೆ. ಈ ಪೈಕಿ 10 ಬೆಡ್ ಐಸಿಯು ರೋಗಿಗಳಿಗೆ ಮೀಸಲಿಡಲಾಗಿದೆ. ಉಳಿದಂತೆ ಕೋಮಾರ್ಬಿಡಿಟೀಸ್‌ಗೆ 8 ಆರೆಂಜ್ ಬೆಡ್ ಹಾಗೂ ಆರೋಗ್ಯವಾಗಿರುವ ಸೋಂಕಿತರಿಗೆ 42 ಗ್ರೀನ್ ಬೆಡ್‌ಗಳನ್ನು ಮೀಸಲು ಇಡಲಾಗಿದೆ.
ಸೋಂಕು ಪತ್ತೆಯಾದ ವಿದೇಶಿ ಪ್ರಯಾಣಿಕರು:
ಸಿಡ್ನಿ-1 , ಹಾಂಕಾಂಗ್ -1, ಫ್ರ್ಯಾಂಕ್ ಫರ್ಟ್ – 1, ಲಂಡನ್ -1, ದುಬೈ -3, ಸಿಂಗಾಪುರ -2, ಥೈಲ್ಯಾಂಡ್ -1 , ಮಾಲ್ಡೀವ್ಸ್ – 1, ಅಬುದಾಬಿ -1.