ಭಗವದ್ಗೀತೆ ಒಂದು ಧರ್ಮಗ್ರಂಥವಲ್ಲ, ಅದು ಇಡೀ ಭಾರತೀಯರ ಪಾಲಿನ ಜೀವನಾಧಾರ: ಬಿ.ಕೆ ವೀಣಾ ದೀದಿ

ಬೀದರ್ ದಿಗಂತ ವರದಿ, ಬೀದರ್:

ಭಗವದ್ಗೀತೆ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದ ಗ್ರಂಥವಲ್ಲ, ಅದು ಇಡೀ ಭಾರತೀಯರ ಪಾಲಿನ ಜೀವನದ ಆಧಾರ ಸ್ಥಂಭವಾಗಿದೆ ಎಂದು ಕಾರವಾರ ಜಿಲ್ಲೆಯ ಶಿರಸಿಯ ಭಗವದ್ಗೀತೆಯ ಜ್ಞಾನಿ ಬಿ.ಕೆ ವೀಣಾ ದೀದಿ ತಿಳಿಸಿದರು.
ಶುಕ್ರವಾರ ನಗರದ ಜನವಾಡ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಭಗವದ್ಗೀತೆಯ ಸಾರ, ಸಾರ, ಖುಷಿಗೆ ಆಧಾರ ಎಂಬ ವಿಷಯ ಕುರಿತು ನಾಲ್ಕು ದಿನಗಳ ಕಾಲ ಜರುಗಲಿರುವ ಭಗವದ್ಗೀತಾ ಜ್ಞಾನ ರಹಸ್ಯ ಅನುಭೂತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಭಗವದ್ಗೀತೆ ಮನುಷ್ಯ ಹೇಳಿದಲ್ಲ, ಭಗವಂತ ಹೇಳಿದ್ದು. ಭಗವಂತನು ಜಗತ್ತಿಗೆ ಸಾರಿದ ಸತ್ಯ ಸಂದೇಶವೇ ಭಗವದ್ಗೀತೆ. ಅಡಳಿತಕ್ಕಾಗಿ ದೇಶಕ್ಕೆ ಸಂವಿಧಾನ ಎಷ್ಟು ಮುಖ್ಯವೋ ಗೀತೆ ಸಾರ ಭಾರತೀಯರ ಪ್ರತಿ ಮನುಷ್ಯಾತ್ಮಗಳ ಜೀವನಾಧಾರವಾಗಿದೆ. ಇದರಲ್ಲಿ 18 ಅಧ್ಯಾಯಗಳು ಹಾಗೂ 700 ಶ್ಲೋಕಗಳಿವೆ. ಭಗವದ್ಗೀತೆಯಲ್ಲಿ ಆರ್ಜುನನಿಗೆ ಇಡೀ ವಿಶ್ವದ ಮಾನವ ಕುಲ ಕೋಟಿಯ ಒಂದು ಪ್ರತಿರೂಪವಾಗಿದ್ದಾನೆ. ಗೀತೆಯಲ್ಲಿ ಹಿಂಸೆ ಎಂಬುದಿಲ್ಲ, ಅದೊಂದು ಎಲ್ಲ ಸಮಸ್ಯೆಗಳನ್ನು ಸಮರ್ಪಕ ರೀತಿಯಲ್ಲಿ ಪರಿಹಾರ ನೀಡುವ ಒಂದು ಮಾರ್ಗದರ್ಶನ. ಜೀವನ ಎಂಬುದು ಒಂದು ಸೈಕಲ್ ತುಳಿದ ಹಾಗೆ. ಆತ್ಮ-ಶರೀರದ ಮಧ್ಯ ಹಾಗೂ ಕರ್ಮ-ಯೋಗದ ಮಧ್ಯ ನಿಲ್ಲುವ ಬ್ಯಾಲೆನ್ಸ್ ಎಂದರೆ ಅದು ಭಗವದ್ಗೀತೆ ಎಂದರು.
ಧರ್ಮ ಎಂಬ ಶಬ್ದ ಧೃತಿ ಎಂಬ ಶಬ್ದದಿಂದ ಬಂದಿದೆ. ಧೃತಿ ಎಂದರೆ ಎತ್ತಿ ಹಿಡಿ ಅಥವಾ ಬದುಕಲು ಬಿಡು ಎಂಬರ್ಥವಿದೆ. ನೀತಿಯ ವಿರೂದ್ಧ ಆಲೋಚನೆಯ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಆದ್ದರಿಂದ ಮನುಷ್ಯರಲ್ಲಿನ ಚಿಂತೆ, ದುಖ, ಅಶಾಂತಿ ದೂರವಾಗಿಸಲು ಭಗವದ್ಗೀತೆಯ ಜ್ಞಾನ ಅಗತ್ಯವಾಗಿದೆ ಎಂದು ವೀಣಾ ದೀದಿ ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯೆ ಗುರಮ್ಮ ಸಿದ್ದಾರೆಡ್ಡಿ, ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಅಶೋಕ ಮಾನುರೆ, ಖ್ಯಾತ ಉದ್ಯಮಿ ಜಯರಾಜ ಖಂಡ್ರೆ, ಜಿಲ್ಲಾಧಿಕಾರಿ ಕಚೇರಿಯ ಭೂಮಾಪನಾ ಇಲಾಖೆಯ ಅಧಿಕಾರಿ ಕೆ.ಸುಜಾತಾ ಹಾಗೂ ನಿವೃತ್ತ ಸರ್ಕಾರಿ ಅಭಿಯೋಜಕ ಗಂಗಣ್ಣ ಸಾವಳಗಿ ಅತಿಥಿಗಳಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!