Wednesday, February 28, 2024

ಬಾಲರಾಮನ ನೋಡಲು ಹರಿದು ಬಂದ ಭಕ್ತ ಸಾಗರ: ನಿಯಂತ್ರಣಕ್ಕಾಗಿ ಬಸ್ ರದ್ದುಗೊಳಿಸಿದ ಯುಪಿ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಯೋಧ್ಯೆಯಲ್ಲಿ ಬಾಲರಾಮನನ್ನು ಕಾಣಲು ಭಕ್ತರು ದೌಡಾಯಿಸುತ್ತಿದ್ದು, ಮಂಗಳವಾರ ಬರೋಬ್ಬರಿ 5 ಲಕ್ಷ ಭಕ್ತರು ರಾಮಲಲಾ ದರ್ಶನ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.

ಇಂದು ದುಪ್ಪಟ್ಟು ಭಕ್ತರು ಆಯೋಧ್ಯೆಗೆ ಧಾವಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆಯೋಧ್ಯೆ ರಸ್ತೆ, ಬೀದಿ, ಹೋಟೆಲ್, ರಾಮಜನ್ಮಭೂಮಿ ಆವರಣ ಎಲ್ಲೆಡೆ ಭಕ್ತ ಸಾಗರವೇ ಇದೆ. ನಿಯಂತ್ರಣಕ್ಕೂ ಮೀರಿ ಭಕ್ತರು ಆಗಮಿಸಿರುವ ಕಾರಣ ಉತ್ತರ ಪ್ರದೇಶ ಸರ್ಕಾರ ತಾತ್ಕಾಲಿಕವಾಗಿ ಆಯೋಧ್ಯೆಗೆ ತೆರಳುವ ಎಲ್ಲಾ ಬಸ್ ರದ್ದುಗೊಳಿಸಿದೆ.

7 ಲಕ್ಷಕ್ಕೂ ಅಧಿಕ ಮಂದಿಗ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಭಕ್ತರ ನಿಯಂತ್ರಿಸುವುದು ರಾಮಜನ್ಮಭೂಮಿಯಲ್ಲಿ ನಿಯೋಜನೆಗೊಂಡಿರುವ ಪೊಲೀಸರಿಗೆ ಸವಾಲಾಗುತ್ತಿದೆ. ಇದೇ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಕೂಡ ಸವಾಲಾಗುತ್ತಿದೆ. ಹೀಗಾಗಿ ಯುಪಿ ಸರ್ಕಾರ ತಾತ್ಕಾಲಿಕವಾಗಿ ಆಯೋಧ್ಯೆ ಬಸ್‌ಗಳನ್ನು ರದ್ದುಗೊಳಿಸಲಾಗಿದೆ.

ಸದ್ಯ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಖಾಸಗಿ ಸರ್ವೀಸ್ ಬಸ್‌ಗಳನ್ನು ರದ್ದುಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ, ತಾತ್ಕಾಲಿಕವಾಗಿ ಖಾಸಗಿ ವಾಹನಗಳನ್ನು ಆಯೋಧ್ಯೆ ಪ್ರವೇಶವನ್ನು ಕೆಲ ಗಂಟೆಗಳ ಕಾಲ ತಡೆಹಿಡಿಯುವ ಸಾಧ್ಯತೆ ಇದೆ. ಆಯೋಧ್ಯೆ ರಾಮ ಮಂದಿರ ದರ್ಶನಕ್ಕಾಗಿ ಆಗಮಿಸಿರುವ ಭಕ್ತರು ಸದ್ಯ ಉತ್ತರ ಪ್ರದೇಶ ಇತರ ಧಾರ್ಮಿಕ ಸ್ಥಳಗಳ ದರ್ಶನ ಪಡೆಯಲು ಸೂಚಿಸಲಾಗಿದೆ. ಆಯೋಧ್ಯೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿರುವ ಕಾರಣ, ತಾತ್ಕಾಲಿಕವಾಗಿ ಬಸ್ ತಡೆ ಹಡಿಯಲಾಗಿದೆ. ಭಕ್ತರು ಸಹಕರಿಸಬೇಕಾಗಿ ಮನವಿ ಮಾಡಲಾಗಿದೆ.

ಉತ್ತರ ಪ್ರದೇಶ ಸಾರಿಗೆ ಸಂಸ್ಥೆ ಪ್ರಕಾರ, ರಾಜ್ಯದ ಮೂಲೆ ಮೂಲೆಗಳಿಂದ ಆಯೋಧ್ಯೆಗೆ ಸೇವೆ ನೀಡುತ್ತಿರುವ 933 ಬಸ್‌ಗಳನ್ನು ತಾತ್ಕಾಲಿಕವಾಗಿ ತಡೆಹಡಿಯಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಬಸ್ ಸಂಚಾರ್ ಪುನರ್ ಆರಂಭಗೊಳ್ಳಲಿದೆ ಎಂದು ವಕ್ತಾರರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!