Thursday, March 30, 2023

Latest Posts

ಭಾರತ್‌ ಜೋಡೋ ಯಾತ್ರೆಯ 2.0: ಪೂರ್ವದಿಂದ ಪಶ್ಚಿಮದತ್ತ ಕಾಂಗ್ರೆಸ್ ಪಯಣ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತ್ ಜೋಡೋ ಯಾತ್ರೆ(Bharat Jodo Yatra)ಯ ಮುಗಿಸಿರುವ ಕಾಂಗ್ರೆಸ್‌ ಈಗ ಪೂರ್ವದಿಂದ ಪಶ್ಚಿಮಕ್ಕೆ ಭಾರತ್‌ ಜೋಡೋ ಯಾತ್ರೆಯ 2.0 ನಡೆಸಲು ಉದ್ದೇಶಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಭಾನುವಾರ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ 85ನೇ ಮಹಾಧಿವೇಶನದಲ್ಲಿ (Congress plenary Session) ಈ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತ್ ಜೋಡೋ ಯಾತ್ರೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ. ಈಗ ಪೂರ್ವದಿಂದ ಪಶ್ಚಿಮಕ್ಕೆ ಕಾಂಗ್ರೆಸ್ ಮತ್ತೊಂದು ಪಾದಯಾತ್ರೆಯನ್ನು ಕೈಗೊಳ್ಳಲಿದೆ. ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್‌ನ ಪೋರ್‌ಬಂದರ್‌ವರೆಗೆ ಈ ಯಾತ್ರೆ ನಡೆಯಲಿದೆ. ಜೂನ್‌ನಿಂದ ಅಕ್ಟೋಬರ್‌ ನಡುವಿನ ಸಮಯದಲ್ಲಿ ಯಾತ್ರೆ ನಡೆಯುವ ಸಾಧ್ಯತೆ ಇದೆ. ಆದರೆ, ಭಾರತ್ ಜೋಡೋ ಯಾತ್ರೆಗಿಂತ ಈ ಯಾತ್ರೆಯ ವಿನ್ಯಾಸ ತುಸು ಭಿನ್ನವಾಗಿರಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಪೂರ್ವ-ಪಶ್ಚಿಮ ಯಾತ್ರೆಯಲ್ಲಿ ಸಾಕಷ್ಟು ಅರಣ್ಯ ಮತ್ತು ನದಿಗಳು ಎದುರಾಗಲಿವೆ. ಇದು ಬಹು-ಮಾದರಿ ಯಾತ್ರೆಯಾಗಿರಬಹುದು, ಆದರೆ ಹೆಚ್ಚಾಗಿ ಇದು ಪಾದಯಾತ್ರೆಯಾಗಿರುತ್ತದೆ ಜೈ ರಾಮ್ ರಮೇಶ್ ಅವರು ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಿಂದ ಈ ವರ್ಷದ ಜನವರಿವರೆಗೆ ಗಾಂಧಿ ಮತ್ತು ಹಲವಾರು ಕಾಂಗ್ರೆಸ್‌ನವರು ಕೈಗೊಂಡ ಸುಮಾರು 4,000 ಕಿಮೀ ಕನ್ಯಾಕುಮಾರಿ-ಕಾಶ್ಮೀರ ಪ್ರಯಾಣದ ನಂತರ ಮತ್ತೊಂದು ಯಾತ್ರೆಗೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ಶಕ್ತಿ ತುಂಬಿದೆ ಎಂದು ಪಕ್ಷದ ಹಿರಿಯ ನಾಯಕ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!