ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇದೀಗ ಮಹರಾಷ್ಟ್ರ ಪ್ರವೇಶಿಸಿದೆ. ಯಾತ್ರೆಗೆ ಅಲ್ಲಿನ ಕಾಂಗ್ರೆಸ್ ಸಮಿತಿ ಸಜ್ಜಾಗಿದ್ದು, ರಾಗಾಗೆ ಭರ್ಜರಿ ಸ್ವಾಗತಕ್ಕೆ ತಯಾರಾಗಿದೆ.
ಸೆ.೭ರಂದು ತಮಿಳುನಾಡಿನಿಂದ ಆರಂಭವಾದ ಯಾತ್ರೆ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿ, ತೆಲಂಗಾಣದವರೆಗೂ ನಡೆದಿದ್ದು, ಇದೀಗ ಮಹಾರಾಷ್ಟ್ರ ತಲುಪಿದೆ.
ಭಾರತ್ ಜೋಡೋ ಯಾತ್ರೆ ಮುಂದಿನ 14 ದಿನ ಪ್ರವಾಸ ನಡೆಸಲಿದೆ. ಮಹಾ ರಾಜ್ಯದ ಐದು ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದೆ.