ನಟ ಅಶೋಕ್ ಕುಮಾರ್ ಪುತ್ರಿ ಭಾರತಿ ಜಾಫೆರಿ ನಿಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಲೋಕದ ಐಕಾನ್​​ ಅಶೋಕ್ ಕುಮಾರ್ ಪುತ್ರಿ ನಟಿ ಭಾರತಿ ಜಾಫೆರಿ ನಿಧನ ಹೊಂದಿದ್ದಾರೆ. ಅವರ ಸಾವಿನ ಬಗ್ಗೆ ಅವರ ಅಳಿಯ, ನಟ ಕನ್ವಾಲ್ಜಿತ್ ಸಿಂಗ್ ಖಚಿತಪಡಿಸಿದ್ದಾರೆ.

‘ನಮ್ಮ ಪ್ರೀತಿಯ ಭಾರತಿ ಜಾಫೆರಿ, ಮಗಳು, ಸಹೋದರಿ, ಹೆಂಡತಿ, ತಾಯಿ, ಅಜ್ಜಿ, ಚಿಕ್ಕಮ್ಮ, ನೆರೆಹೊರೆಯವರು, ಸ್ನೇಹಿತ ಮತ್ತು ಸ್ಫೂರ್ತಿ ಅವರು ಸೆಪ್ಟೆಂಬರ್ 20ರಂದು ನಿಧನರಾಗಿದ್ದಾರೆ” ಎಂದು ಬರೆದು ಭಾರತಿ ಜಾಫೆರಿ ಅವರ ಫೋಟೋದೊಂದಿಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈನ ಚೆಂಬೂರ್ ಕ್ಯಾಂಪ್‌ನ ಚೆರೈ ಸ್ಮಶಾನದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಸಿಂಗ್ ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.
2001ರ ಕಲ್ಪನಾ ಲಜ್ಮಿ ನಿರ್ದೇಶನದ ದಮನ್ ಚಿತ್ರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!