Wednesday, August 17, 2022

Latest Posts

ಭಟ್ಕಳ: ಪಾಳು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 900 ಚೀಲ ಪಡಿತರ ಅಕ್ಕಿ ವಶ

ಹೊಸದಿಗಂತ ವರದಿ, ‌ಭಟ್ಕಳ
ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಸಲಗದ್ದೆಯ ನಿರ್ಜನ ಪ್ರದೇಶದಲ್ಲಿನ ಪಾಳುಬಿದ್ದ ಗೋವೆ ಬೀಜಗಳ ಸಂಗ್ರಹದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 900ಕ್ಕೂ ಅಧಿಕ ಪಡಿತರ ಅಕ್ಕಿಯನ್ನು ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕರ ದೂರಿನ್ವಯದಂತೆ ತಹಶೀಲ್ದಾರ ಡಾ.ಸುಮಂತ, ನಗರ ಠಾಣೆ ಸಿಪಿಐ ದಿವಾಕರ ಹಾಗೂ ಗ್ರಾಮೀಣ ಠಾಣೆ ಸಿಪಿಐ ಮಹಾಬಲೇಶ್ವರ ನೇತೃತ್ವದಲ್ಲಿ ಅಕ್ರಮ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟ ಗೋದಾಮಿನ ಮೇಲೆ ದಾಳಿ ನಡೆಸಲಾಗಿದೆ. ತಾಲೂಕಿನ ಗ್ರಾಮಿಣ ಪ್ರದೇಶ ಗಳಿಂದ ಸಂಗ್ರಹಿ ದಾಳಿ ಅಕ್ಕಿಯನ್ನು ನಾನಾ ಕಡೆಗಳಿಂದ ಜನರಿಂದ ಪಡೆದುಸಂಗ್ರಹಿಸಿ, ಕಡಸಲಗದ್ದೆ ಯಲ್ಲಿನ ನಿರ್ಜನ ಪ್ರದೇಶದ ಕ್ಯಾಶ್ಯು ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!