ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಕನ್ನಡ ಸೀಸನ್ 11 ಫಿನಾಲೆ ನಡೆಯುತ್ತಿದ್ದು. ಫಿನಾಲೆ ಎಪಿಸೋಡ್ಗೆ ಅದ್ಧೂರಿಯಾಗಿ ವೇದಿಕೆಗೆ ಎಂಟ್ರಿ ಕೊಟ್ಟ ಸುದೀಪ್ ತಮ್ಮ ಎಂದಿನ ಜೋಷ್ನಲ್ಲಿ ಫಿನಾಲೆ ನಡೆಸುತ್ತಿದ್ದಾರೆ.
ಫಿನಾಲೆ ವಾರದಲ್ಲಿ ರಜತ್, ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಅವರುಗಳು ಕೊನೆಯಲ್ಲಿ ಉಳಿದುಕೊಂಡಿದ್ದರು. ಇವರಲ್ಲಿ ಇಬ್ಬರು ಇಂದು ಎಲಿಮಿನೇಟ್ ಆದರೆ ಉಳಿದ ನಾಲ್ವರಲ್ಲಿ ನಾಳೆ ಹೊರ ಹೋಗುವುದು ಯಾರು ಎಂಬುದು ತಿಳಿಯಬೇಕಾಗಿದೆ.
ಇಂದಿನ ಎಪಿಸೋಡ್ನಲ್ಲಿ ಭವ್ಯಾ ಗೌಡ ಬಿಗ್ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ. ಫಿನಾಲೆ ವರೆಗೆ ಅದ್ಭುತವಾಗಿ ಆಡುತ್ತಾ ಬಂದಿದ್ದ ಭವ್ಯಾ ಟ್ರೋಫಿ ಹಿಡಿಯಲು ಇನ್ನೊಂದು ಮೆಟ್ಟಿಲಷ್ಟೆ ಇರುವಾಗ ಬಿಗ್ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.