ದಿನಭವಿಷ್ಯ: ಇಂದು ನಿಮಗೆ ಮಾನಸಿಕ ನೆಮ್ಮದಿ, ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ

ಮೇಷ
ಮನೆಯವರ  ಬೇಡಿಕೆ ಕಡೆಗಣಿಸದಿರಿ. ಅವರ ಅಭಿಪ್ರಾಯ ಆಲಿಸಿರಿ. ವೃತ್ತಿಯ ಒತ್ತಡ ಖಾಸಗಿ ಬದುಕಿನ ಮೇಲೆ ಪರಿಣಾಮ ಬೀರೀತು.
ವೃಷಭ
ವ್ಯವಹಾರದಲ್ಲಿ ಗೊಂದಲ ಸಂಭವ. ಕೌಶಲದಿಂದ ಅದನ್ನು ನಿಭಾಯಿಸಿ. ಆತುರ, ದುಡುಕು ಬೇಡ. ಕೌಟುಂಬಿಕ ಅಸಹನೆ.
ಮಿಥುನ
ಖಾಸಗಿ ವಿಷಯ ಮನಶ್ಯಾಂತಿ  ಕದಡುವುದು. ನಿಮ್ಮ ವಿಚಾರದಲ್ಲಿ ಮೂಗು ತೂರಿಸುವವರನ್ನು ದೂರವಿಡಿ.
ಕಟಕ
ಯೋಜಿಸಿ ಕಾರ್ಯ ಎಸಗಿ. ಅನವಶ್ಯ ಗೊಂದಲ ನಿವಾರಿಸಿಕೊಳ್ಳಿ.  ಖಾಸಗಿ ಬದುಕು ಮತ್ತು ವೃತ್ತಿಯ ಮಧ್ಯೆ ಸಮತೋಲನ ಸಾಽಸಿರಿ.
ಸಿಂಹ
ನಿಮ್ಮ ಖರ್ಚು ಇಂದು ಹೆಚ್ಚಬಹುದು. ಅದು ಅನಿವಾರ್ಯ. ಮನೆಯಲ್ಲಿ ಬಿಕ್ಕಟ್ಟು ಪರಿಹಾರ, ಬಂಧುಗಳ ಸಹಕಾರ.
ಕನ್ಯಾ
ಆಪ್ತರ ಸಂಗದಲ್ಲಿ ಹೆಚ್ಚು ಖುಷಿ ಕಾಣುವಿರಿ. ವೃತ್ತಿಯ ಒತ್ತಡ ನಿಮ್ಮನ್ನು ಇಂದು ಬಾಽಸಲಾರದು. ಹಣದ ವಿಚಾರದಲ್ಲಿ ಪೂರಕ ಬೆಳವಣಿಗೆ.
ತುಲಾ
ಭಾವನಾತ್ಮಕ ತಲ್ಲಣ ಅನುಭವಿಸುವಿರಿ. ಆತ್ಮೀಯರೊಂದಿಗಿನ ವ್ಯವಹಾರ ಅದಕ್ಕೆ ಕಾರಣ. ಕೆಲ ವಿಚಾರಗಳಲ್ಲಿ ನಿರ್ಲಿಪ್ತ ಧೋರಣೆ ಒಳಿತು.
ವೃಶ್ಚಿಕ
ಇತರರ ಏಳಿಗೆಯ ಕುರಿತು ಚಿಂತಿಸುತ್ತಾ ನಿಮ್ಮ ಸ್ವಂತ ವ್ಯವಹಾರ ಕಡೆಗಣಿಸಬೇಡಿ.  ಕೌಟುಂಬಿಕ ಸಹಕಾರ ಪಡೆಯಿರಿ.
ಧನು
ನಿಮ್ಮ ಗುರಿಯನ್ನು ಸುಲಭದಲ್ಲಿ ಸಾಧಿಸುವಿರಿ. ಸಾಂಸಾರಿಕ ಬಿಕ್ಕಟ್ಟಿಗೆ ಸೌಹಾರ್ದ ಪರಿಹಾರ. ಭಿನ್ನಮತ ನಿವಾರಣೆಗೆ ಮಾತುಕತೆಯೇ ದಾರಿ.
ಮಕರ
ಮಾನಸಿಕ ಒತ್ತಡ ನಿಭಾಯಿಸಿ. ಇಲ್ಲವಾದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರೀತು. ಆರ್ಥಿಕ ಸಮಸ್ಯೆ ತುಸು ನಿವಾರಣೆ.
ಕುಂಭ
ಸಮಸ್ಯೆಗಳ ಬಗ್ಗೆ ಇತರರ ಜತೆ ಚರ್ಚಿಸಿ. ಅದರಿಂದ ಮನಸ್ಸಿಗೆ ಸಮಾಧಾನ. ನಿಮ್ಮಲ್ಲೇ ಕೊರಗುತ್ತಾ ಕೂರಬೇಡಿ. ಖರ್ಚು ಅಽಕ.
ಮೀನ
ಕೆಲ ವಿಷಯಗಳಲ್ಲಿ ದ್ವಂದ್ವ ಕಾಡಲಿದೆ. ಯಾವುದು ಸರಿ, ಯಾವುದು ತಪ್ಪು ಎಂದು ಅರಿಯಲಾಗದೆ ಗೊಂದಲ ಉಂಟಾಗಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!